Ad Widget

ಅರಂತೋಡು ವಲಯ ಭಜನಾ ಪರಿಷತ್ ಸಭೆ – ಗ್ರಾಮ ಮಟ್ಟದಲ್ಲಿ ಭಜನಾ ತರಬೇತಿ

. . . . . . . . .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯದ ವತಿಯಿಂದ ಭಜನಾ ಪರಿಷತ್ ನ ಸಭೆಯು ಅರಂತೋಡು ರಬ್ಬರ್ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಭಜನಾ ಪರಿಷತ್ ನ ನಿರ್ದೇಶಕರಾದ ಸೋಮಶೇಖರ್ ಪೈಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸಂಪಾಜೆ ವಲಯ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಭಜನಾ ತರಬೇತಿ ಆಯೋಜನೆ ಮಾಡುವುದಾಗಿ ನಿರ್ಣಯಿಸಲಾಯಿತು. ವಲಯದ ಎಲ್ಲಾ ಮಂಡಳಿಯ ಸದಸ್ಯರನ್ನು ಕರೆದು ಸಭೆ ಮಾಡುವುದೆಂದು ತೀರ್ಮಾನಿಸಲಾಯಿತು.ಸಭೆಯಲ್ಲಿ ವಲಯ ಸಮಿತಿ ರಚಿಸಲಾಗಿದ್ದು ವಲಯದ ಅಧ್ಯಕ್ಷರಾಗಿ ಕೆ ಆರ್ ಪದ್ಮನಾಭ ಕುರುಂಜಿ ಹಾಗೂ ಸದಸ್ಯರುಗಳಾಗಿ ಚಂದ್ರಶೇಖರ್ ಆಚಾರ್ಯ ತೊಡಿಕಾನ, ರತ್ನಾಕರ ರೈ ಆರಂಬೂರು, ಸತೀಶ್ ಅಂಬೆಕಲ್ಲು ಸಂಪಾಜೆ, ರೋಹಿಣಿ ಅಂಗಡಿಮಜಲು ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಪಾಜೆ ವಲಯ ಜನಜಾಗೃತಿ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು ಶ್ರೀದುರ್ಗಾಮಾತ ಭಜನಾ ಮಂದಿರದ ಅಧ್ಯಕ್ಷರಾದ ಕೆ ಆರ್ ಪದ್ಮನಾಭ ಕುರುಂಜಿ,ಜತ್ತಪ್ಪ ಗೌಡ ಅಳಿಕೆ, ಭವಾನಿಶಂಕರ್ ಅಡ್ತಲೆ, ಚಂದ್ರಶೇಖರ ನೆಡ್ಚಿಲ್, ವಲಯದ ಭಜನಾ ಮಂದಿರಗಳ ಅಧ್ಯಕ್ಷರು ಸದಸ್ಯರು ಗಳು, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading