Ad Widget

ದುಗ್ಗಲಡ್ಕ: ಉಚಿತ ಆರೋಗ್ಯ ತಪಾಸಣೆ ಶಿಬಿರ

. . . . . . . . .

ಸುಳ್ಯ: ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸುಳ್ಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ದುಗಲಡ್ಕದ ದುಗ್ಗಲಾಯ ದೇವಸ್ಥಾನ ಸಮಿತಿ, ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳುಕೂಟ, ಅಯ್ಯಪ್ಪ ಭಜನಾ ಮಂದಿರ ಸಮಿತಿ , ಹಾಲು ಸೊಸೈಟಿ, ದುಗ್ಗಲಾಯ ಮಹಿಳಾ ಸೇವಾ ಸಂಘ, ಶಿವಾಜಿ ಯುವ ವೃಂದ, ದುಗ್ಗಲಾಯ ಯುವ ಸೇವಾ ಸಂಘ, ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ, ಅಂಗನವಾಡಿ ಕೇಂದ್ರ , ಧರ್ಮಸ್ಥಳ ಗ್ರಾ. ಯೋಜನೆ ಒಕ್ಕೂಟ ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ನ.26 ರಂದು ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಶ್ರೀ ಜೆ. ರೈ ವಹಿಸಿದ್ದರು. ಉದ್ಘಾಟನೆಯನ್ನು ಲಯನ್ಸ್ ವಲಯಾಧ್ಯಕ್ಷ ಗಂಗಾಧರ ರೈ ಸೋಣಂಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ಡಾ.ಲಕ್ಷ್ಮೀಶ ಕೆ.ಎಸ್., ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಕುರಲ್ ತುಳುಕೂಟದ ಸಂಚಾಲಕ ಕೆ. ಟಿ. ವಿಶ್ವನಾಥ, ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್, ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್, ತುಳುಕೂಟದ ಅಧ್ಯಕ್ಷ ನವ್ಯ ದಿನೇಶ್, ಕೆವಿಜಿ ಆಯುರ್ವೇದ ಹಾಸ್ಪಿಟಲ್ ಎಕ್ಸಿಕ್ಯೂಟಿವ್ ವಿನಯಕುಮಾರ್ ಬೆದ್ರುಪಣೆ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಹರ್ಷಿತಾ, ಡಾ ಭಾಗ್ಯೇಶ್, ಡಾ. ಅವಿನಾಶ್, ಪ್ರೌಢಶಾಲಾ ಎಸ್ ಡಿಎಂಸಿ ಸದಸ್ಯೆ ಲೀಲಾ ಬಾಬು ಮಣಿಯಾಣಿ ಉಪಸ್ಥಿತರಿದ್ದರು. ಅಧ್ಯಕ್ಷೆ ಲ. ರೂಪಶ್ರೀ ಜೆ.ರೈ ಸ್ವಾಗತಿಸಿ, ಕೋಶಾಧಿಕಾರಿ ಡಾ. ಲಕ್ಷ್ಮೀಶ ಕೆ.ಎಸ್. ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಅನೇಕ ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading