ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ದಿನ ಈ ಭಾರಿ ವಿಶೇಷವಾಗಿ ಕುಣಿತ ಭಜನೋತ್ಸವ ನೆರವೇರಿತು. ಶ್ರೀ ದೇವರ ರಥೋತ್ಸವದ ಮೊದಲು ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆ ವರೆಗೆ ಕುಣಿತ ಭಜನೆ ನೆರವೇರಿತು. 175ಕ್ಕೂ ಅಧಿಕ ತಂಡಗಳಿಂದ ಸುಮಾರು 1750 ಮಂದಿ ಕುಣಿತ ಭಜನೆಯ ಮೂಲಕ ಭಗವನ್ನಾಮ ಸ್ಮರಣಾ ಸೇವೆಯನ್ನು ಸಮರ್ಪಿಸಿದರು. ಭಜನಾ ಸಂಭ್ರಮದಲ್ಲಿ ಖ್ಯಾತ ಗಾಯಕ ಜಗದೀಶ ಆಚಾರ್ಯ ಪುತ್ತೂರು ಅವರ ಹಾಡಿಗೆ ತಂಡಗಳು ಹೆಜ್ಜೆ ಹಾಕಿದವು. ಸಂಜೆ 7.30ರಿಂದ 9.30ರ ತನಕ ಕುಣಿತ ಭಜನೆ ನಡೆಯಿತು.ವಿದ್ಯಾರ್ಥಿಗಳು, ಊರವರು, ಭಕ್ತರು, ಸಂಘ ಸಂಸ್ಥೆಗಳು, ಭಕ್ತರು ಕುಣಿತ ಭಜನೋತ್ಸವದಲ್ಲಿ ಭಾಗವಹಿಸಿದ್ದರು.ಪ್ರತಿ ತಂಡದಲ್ಲಿ 10 ಮಂದಿ ಸದಸ್ಯರಿದ್ದರು.ಅಲ್ಲದೆ ಪ್ರತಿ ತಂಡಕ್ಕೂ ಪ್ರತ್ಯೇಕ ಸ್ಥಳ ನಿಯೋಜನೆ ಮಾಡಲಾಗಿತ್ತು.ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆವರೆಗಿನ ರಸ್ತೆಯಲ್ಲಿ 10 ಮಂದಿ ಸದಸ್ಯರನ್ನೊಳಗೊಂಡ ಭಜನಾ ತಂಡಗಳು ಸೇವೆ ನೆರವೇರಿಸಿದವು.ತಂಡದ ಸದಸ್ಯರು ಭಾರತೀಯ ಉಡುಗೆಯನ್ನು ಧರಿಸಿ ಸೇವೆ ನೆರವೇರಿಸಿದರು.ಕುಣಿತ ಭಜನೋತ್ಸವವನ್ನು ಸಾಮಾಜಿಕ ಕಾರ್ಯಕರ್ತ ಕರ್ನಾಟಕ ದೇವಾಲಯಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಉದ್ಘಾಟಿಸಿದರು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
- Friday
- November 1st, 2024