
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗುತ್ತಿಗಾರು ಹಾಗೂ ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇದರ ವತಿಯಿಂದ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ನ.20 ರಿಂದ ಪ್ರತೀ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ತರಬೇತಿಯನ್ನು ನೀಡುತ್ತಿದ್ದು, ಮಕ್ಕಳಿಗೆ ಕಲಿಕೆಯ ಜೊತೆಗೆ ಗ್ರಂಥಾಲಯದ ಸದ್ಬಳಕೆ, ಕ್ರಿಯಾತ್ಮಕ ಚಟುವಟಿಕೆ ಮುಖಾಂತರ ಬೌದ್ಧಿಕ ಸಾಮರ್ಥ್ಯ ಚಟುವಟಿಕೆಗಳು, ಗಣಿತ ಹಾಗೂ ಭಾಷಾ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಉಚಿತವಾಗಿದ್ದು, ಮಕ್ಕಳಿಗೆ ಪರಿಕರಗಳ ಬಾಬ್ತು 500 ರೂಪಾಯಿ ನೋಂದಣಿ ಶುಲ್ಕ ಪಾವತಿಸಬೇಕು.
ಸತತ ನಾಲ್ಕು ವರ್ಷಗಳಿಂದ ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಈ ತರಬೇತಿಯನ್ನು ಈ ಬಾರಿ ಮಕ್ಕಳಿಗೆ ಪುಸ್ತಕದ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ 5ನೇ ವರ್ಷದ ತರಬೇತಿಯನ್ನು ಗ್ರಂಥಾಲಯದಲ್ಲಿ ನಡೆಸಲಾಗುತ್ತಿದೆ.
ವರದಿ : ಉಲ್ಲಾಸ್ ಕಜ್ಜೋಡಿ