
ರಿಕ್ಷಾದಲ್ಲಿ ದುಡಿಯುತ್ತಾ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ಚಂದ್ರಶೇಖರ ಕಡೋಡಿ ಅವರಿಗೆ ರೆಡ್ ಕ್ರಾಸ್ ಸದಸ್ಯತ್ವವನ್ನು ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಬಿ.ಕೆ ಕುಸುಮಾಧರ್ ಅವರು ನೀಡಿ ಗೌರವಿಸಿದರು. ಸ್ವತಃ ರಕ್ತದಾನಿಯಾಗಿ ರಕ್ತದಾನ ಶಿಬಿರ ಹಾಗೂ ತುರ್ತು ಸಂದರ್ಭಗಳಲ್ಲಿ ಸ್ಪಂದನೆ ಸೇರಿದಂತೆ ಚಂದ್ರಶೇಖರ ಕಡೋಡಿ ಅವರ ಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಸುಧಾಕರ್.ರೈ, ರೆಡ್ ಕ್ರಾಸ್ ಜಿಲ್ಲಾ ಪ್ರತಿನಿಧಿ ಸಿ.ಎ ಗಣೇಶ್ ಭಟ್, ಜಿಲ್ಲಾ ಮ್ಯಾನೆಜಿಂಗ್ ಕಮಿಟಿ ಸದಸ್ಯರಾದ ಡಾ.ಸತೀಶ್ ರಾವ್ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಚಂದ್ರಶೇಖರ ಕಡೋಡಿ ಅವರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಅಧ್ಯಕ್ಷರು, ವಾಲ್ತಾಜೆ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾಗಿ ಹಾಗೂ ಗುತ್ತಿಗಾರು ಬಿ.ಯಂ.ಯಸ್ ರಿಕ್ಷಾ ಯೂನಿಯನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯ ಸದಸ್ಯರಾಗಿರುತ್ತಾರೆ.
ವರದಿ :- ಉಲ್ಲಾಸ್ ಕಜ್ಜೋಡಿ