
ಮಂಗಳೂರಿನಲ್ಲಿ ಇಂದು ನಡೆದ ಕೆದಂಬಾಡಿ ರಾಮಯ್ಯಗೌಡರ ಪುತ್ಥಳಿಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಾಲೂಕು ರೈತ ಸಂಘದ ಸುಮಾರು 40 ಜನ ಭಾಗವಹಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು, ಗೌರವಾಧ್ಯಕ್ಷರಾದ ನೂಜಾಲು ಪದ್ಮನಾಭ ಗೌಡ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ, ತಾಲೂಕು ಉಪಾಧ್ಯಕ್ಷ ಮಾಧವ ಗೌಡ ಸುಳ್ಯ ಕೋಡಿ, ಸುಳ್ಯದ ಸಂಚಾಲಕರಾದ ಸೇಬಾಸ್ಟಿನ್ ಮಡಪಾಡಿ, ರೈತ ಮುಖಂಡರಾದ ಜಯಪ್ರಕಾಶ್ ನೆಕ್ರಪ್ಪಾಡಿ, ಮಂಜುನಾಥ ಮಡ್ತಿಲ, ನವೀನ್ ಸಾರಕೆರೆ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.