ಭಾರತದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾ ಗಾಂಧಿಯವರ 106ನೇ ವರ್ಷದ ಜನ್ಮದಿನಾಚರಣೆಯನ್ನು ಇಂದು ಸುಳ್ಯದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ,ನಗರ ಪಂಚಾಯತ್ ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಕೊಡೆಂಕಿರಿ ದೇಶದ ಪ್ರಧಾನಿಯಾಗಿ ಭಾರತಕ್ಕೆ ಇಂದಿರಾ ಗಾಂಧಿಯವರು ನೀಡಿದ ಕೊಡುಗೆ ಮತ್ತು ತ್ಯಾಗವನ್ನು ನೆನಪಿಸಿ ನುಡಿನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ ಎಂ ಮುಸ್ತಫಾ ಮಾತನಾಡಿ ಶ್ರಿಮತಿ ಇಂದಿರಾ ಗಾಂಧಿಯವರು ಗಾಂಧಿ ಕುಟುಂಬದ ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ನಾಯಕಿ ಮತ್ತು 20 ಅಂಶದ ಕಾರ್ಯಕ್ರಮಗಳ ಮೂಲಕ ಹಾಗೂ ಬ್ಯಾಂಕ್ ರಾಷ್ಟ್ರೀಕರಣ ಮಾಡಿ ಆರ್ಥಿಕ ಪುನಶ್ಚೇತನ ನೀಡಿದವರು, ಉಳುವವನೆ ಹೊಲದೊಡೆಯ ಮುಂತಾದ ಕ್ರಾಂತಿಕಾರಿ ಯೋಜನೆಗಳ ಮೂಲಕ ದೇಶಕ್ಕೆ ಭದ್ರ ಬುನಾಧೀಯನ್ನು ಹಾಕಿಕೊಟ್ಟು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪಣತೊಟ್ಟ ಧೀಮಂತ ಮಹಿಳೆ ಎಂದರು. ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ತೀರ್ಥರಾಮ ಜಾಲ್ಸೂರು, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಳು, ಭೋಜಪ್ಪ ನಾಯ್ಕ ಅಡ್ಕಾರು, ಸಿದ್ದಿಕ್ ಕೊಕ್ಕೊ, ಹನೀಫ್ ಬೀಜಕೊಚ್ಚಿ, ಶಹೀದ್ ಪಾರೆ, ಚೇತನ್ ಕಜೆಗದ್ದೆ, ಜುಬೆರ್ ಅರಂತೋಡು, ಮಹಮ್ಮದ್ ಪವಾಜ್ ಕನಕಮಜಲು, ರಂಜಿತ್ ರೈ ಮೇನಾಲ, ಸುರೇಶ್ ಕಾಮತ್ ಜಯನಗರ, ಗಂಗಾಧರ್ ಮೇನಾಲ ಉಪಸ್ಥಿತರಿದ್ದರು. ನಗರ ಅಧ್ಯಕ್ಷ ಶಶಿಧರ್ ಎಂ ಜೆ ಸ್ವಾಗತಿಸಿ, ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ ವಂದಿಸಿದರು.