ಸಪ್ತಪದಿ ಇದು ಸಪ್ತಪದಿ ಈ ಏಳು ಹೆಜ್ಜೆಗಳ ಸಂಬಂಧ ನಮ್ಮ ಏಳು ಜನ್ಮಗಳ ಅನುಬಂಧ.
ಮದುವೆ ಎಂದಾಕ್ಷಣ ತಾಳಿ ಕಟ್ಟುವಿಕೆ , ಧಾರ ಕಾರ್ಯಕ್ರಮ, ಬೀಗರ ಔತಣ, ಪ್ರಾಮುಖ್ಯ ಪಡೆಯುತ್ತದೆ. ಹಾಗೆ ಅಲಂಕಾರ ಪ್ರಿಯರೇ ಅದರಲ್ಲೂ ಏಳು ಹೆಜ್ಜೆಯ ಸಪ್ತಪದಿ ಶಾಸ್ತ್ರವು ಲಾಜ ಹೋಮದ ಹತ್ತಿರ ನಡೆಯುತ್ತದೆ. ಆದರೆ ಇಲ್ಲಿ ಏಳು ಹೆಜ್ಜೆಗಳನ್ನು ಹೂವಲ್ಲಿ ಅಲಂಕರಿಸಿ ಒಂದೊಂದು ಹೆಜ್ಜೆಗಳಲ್ಲಿ ಅದರ ಅರ್ಥವನ್ನು ಶ್ಲೋಕದಲ್ಲೂ ಬಿಂಬಿಸಿ ಸಮಾರಂಭಕ್ಕೆ ಕಳೆಗಟ್ಟುವಂತೆ ನೋಡುಗರನ್ನು ಸಪ್ತಪದಿಯು ಆಕರ್ಷಿಸುತ್ತಿದೆ. ಹೀಗೂ ಮಾಡಬಹುದಲ್ಲವೇ ಮದುವೆಯ ಸಮಾರಂಭದಲ್ಲಿ ಸಾಂಪ್ರದಾಯಿಕ ವಿಶಿಷ್ಟ ರೀತಿಯಲ್ಲಿ ಪೂರಕವಾಗಿ ನಿರ್ಮಾಣವಾಗಿದೆ. ಚೆಂಡು ಹೂವು ಹಳದಿ ಕೆಂಪು ಗುಲಾಬಿ ಹೀಗೆ ವೈವಿಧ್ಯಮಯ ಹೂಗಳಿಂದ ಅಲಂಕರಿಸಿ ವೈವಿಧ್ಯತೆಯನ್ನು ಸಾರಿತು ಚೆಲುವು ಚಿತ್ತಾರದ ಬೆಡಗಿ ಹೂವು ಚೆಲುವೆಲ್ಲ ತಾನೆಂದಿತು.
ಚಿತ್ರ,ಬರಹ : ಕುಮಾರ್ ಪೆರ್ನಾಜೆ