
ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನ.13 ರಂದು ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಭೇಟಿ ನೀಡಿ ದೇವರ ದರುಶನ ಪಡೆದರು.
ಸುರೇಶ್ ಕುಮಾರ್ ರವರು ಕ್ಷೇತ್ರಕ್ಕೆ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಚಂದ್ರಶೇಖರ ಮಾವಿನಕಟ್ಟೆ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಕುಮಾರ್ ಚಾರ್ಮತ, ದೀರನ್ ಪರಮಲೆ, ಚಂದ್ರಶೇಖರ ಬಾಳುಗೋಡು, ಗಂಗಾಧರ ಉತ್ರಂಬೆ, ನಾಗಪ್ಪ ಗೌಡ ಚಾರ್ಮತ, ವಿಶ್ವನಾಥ ಜತ್ತಿಲ, ಧರ್ಮಪಾಲ ಮರಕತ, ಮೋಹನಾಂಗಿ ಹುದೇರಿ, ವಿನ್ಯಾಸ್ ಕೊಚ್ಚಿ, ಹರಿಪ್ರಸಾದ್ ಕಲ್ಲಾಜೆ, ಗಂಗಾಧರ ಮಣಿಯಾನ, ಶ್ಯಾಮಯ್ಯ ಚೆಮ್ನೂರು, ಸತೀಶ್ ಬಂಬುಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.