- Thursday
- November 21st, 2024
ಎಲ್ಲರಿಗೆ ಸರಕಾರಿ ಉದ್ಯೋಗ ಸಿಗುವುದು ಕಷ್ಟ, ಇಂತಹ ಸಂದರ್ಭಗಳಲ್ಲಿ ಯುವಕರು ವಂಚಿತರಾಗಬಾರದೆನ್ನುವ ಉದ್ದೇಶದಿಂದ ಇಂತಹ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗಿದ್ದು ಮಹತ್ವ ಪಡೆಯಲಿದೆ ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಅವರು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿರುವ...
ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಂಡಿರುವ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ನ.19 ರಂದು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸುಳ್ಯದಿಂದ 10 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಚಂದ್ರ ಕೋಲ್ಚಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಯನ್ನು...
2022-2ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ (1-10ನೇ ತರಗತಿ) ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಎಸ್ಎಸ್ ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಉದ್ಯಮಿ ಸುಳ್ಯದ ರೂಪ ಬಾರ್ ಮಾಲಕರಾದ ಸುಂದರ ರಾವ್ ರವರ ಪುತ್ರ ಸಂದೀಪ್ ರಾವ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬೆನಕಾ ಕ್ರೀಡಾ ಮತ್ತು ಕಲಾ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಮೃತರು ತಂದೆ,ತಾಯಿ, ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
ಪ್ರತಿಷ್ಠಿತ ಸ್ವದೇಶಿ ಸಂಸ್ಥೆಯಾಗಿರುವ ಮೋದಿಕೇರ್ ಸಂಸ್ಥೆಯ ಕಾರ್ಯಚಟುವಟಿಕೆ, ಬೆಳವಣಿಗೆ ಹಾಗೂ ಸ್ವದೇಶಿ ಉತ್ಪನ್ನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನ.18 ರಂದು ಸುಬ್ರಹ್ಮಣ್ಯದ ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಸ್ವದೇಶಿ ಉತ್ಪನ್ನಗಳ ಬಗ್ಗೆ, ಸ್ವ ಉದ್ಯೋಗ ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯದ ಡಿಸ್ಟ್ರಿಬ್ಯೂಟ್ ಪಾಯಿಂಟ್ ನ ಮುರಳೀಕೃಷ್ಣ ಕಾಮತ್ ತಿಳಿಸಿದ್ದಾರೆ. ಹೆಚ್ಚಿನ...
ಕರ್ನಾಟಕ ನಾಟ್ಯ ಶಾಂತಲೆ ರತ್ನ ಪ್ರಶಸ್ತಿಯನ್ನು ಅವನಿ ಎಂ ಎಸ್ ಪಡೆದುಕೊಂಡರು. ನ.5 ಮತ್ತು 6ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸುಕ್ಷೇತ್ರ ಮಸೂದಿ ಶ್ರೀ ಜಗದೀಶ್ವರ ಹಿರೇಮಠದ ಜಗದೀಶ್ವರ ಮಂದಿರದ ದ್ವಾದಶ ವಾರ್ಷಿಕೋತ್ಸವ ಹಾಗೂ ನಿಂಬಾಳದ ಮೌನ ತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ 80ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ...
ಗುತ್ತಿಗಾರಿನಲ್ಲಿ ಕಳೆದ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿವರಾಮ ದೇವ ಮಾಲಕತ್ವದ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಮತ್ತು ಜೆರಾಕ್ಸ್ ಇದರ ಸಹಸಂಸ್ಥೆಯಾದ ಪಂಜದ ವಾಣಿಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಮತ್ತು ಜೆರಾಕ್ಸ್ ಸಂಸ್ಥೆಯು ಒಂದು ವರ್ಷವನ್ನು ಪೂರೈಸುತ್ತಿದ್ದು ಆ ಪ್ರಯುಕ್ತ ನ.12 ರಂದು ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ...
ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯು ೨೦೨೧-೨೦೨೨ನೇ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಾಶ್ವತ್ ಕೆ.ಎಸ್ ರಾಜ್ಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.ಇವರು ವಿರಾಜಪೇಟೆ ತಾಲೂಕು, ಸಿದ್ದಾಪುರ,ಕರಡಿಗೋಡು ಗ್ರಾಮದ ಕುಕ್ಕನೂರು ಸೂರಜ್ ಹಾಗೂ ಚಂಚಲ್ ದಂಪತಿಗಳ ಪುತ್ರ....
ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆ ಸುಳ್ಯ ಇದರ ತರಬೇತಿ ಅಧಿಕಾರಿಯಾಗಿದ್ದ ದಿನೇಶ್ ಮಡ್ತಿಲ ಅವರು ಉಪಪ್ರಾಂಶುಪಾಲರಾಗಿ ನ.೭ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಿನೇಶ್ ಮಡ್ತಿಲರನ್ನು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿದ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ ಯವರು ದಿನೇಶ್...
Loading posts...
All posts loaded
No more posts