ಎಸ್‌ಎಸ್‌ಎಫ್ ಗೂನಡ್ಕ ಯುನಿಟ್ ಇದರ ವತಿಯಿಂದ ,ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುತ್ತಿರುವ ಎಸ್‌ಎಸ್‌ಎಫ್ ದ.ಕ ಈಸ್ಟ್ ಜಿಲ್ಲಾ ಕೋಶಧಿಕಾರಿ ಯಾಗಿರುವ ಸಿದ್ದೀಕ್ ಗೂನಡ್ಕ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಹಯಾತುಲ್ ಇಸ್ಲಾಂ ಮದರಸ ಗೂನಡ್ಕದಲ್ಲಿ ದಿ. ೮ ರಂದುಇಶಾ ನಮಾಝಿನ ಬಳಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಎಂ ಗೂನಡ್ಕ ಇದರ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ವಹಿಸಿದರು. ಬಿಜೆಎಂ ಗೂನಡ್ಕ ಸದರ್ ಮುಅಲ್ಲಿಮರಾದ ಹಬೀಬ್ ಹಿಮಮಿ ಉಸ್ತಾದರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್‌ವೈಎಸ್‌ಗೂನಡ್ಕ ಶಾಖೆ ಅಧ್ಯಕ್ಷರಾದ ಹನೀಫ್ ಝೈನಿ ಉಸ್ತಾದರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಎಸ್‌ವೈಎಸ್ ನಾಯಕರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮುಖ್ತಾರ್ ಹಿಮಮಿ ಮೇನಾಲರವರು ಕಾರ್ಯಕ್ರಮದ ಅನುಸ್ಮರಣಾ ಭಾಷಣ ಮಾಡಿದರು. ಎಸ್‌ಎಸ್‌ಎಫ್ ಗೂನಡ್ಕ ಶಾಖೆಯ ಕಾರ್ಯಕರ್ತರು ಅಧೂರಿಯಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಎಸ್‌ವೈಎಸ್ ಗೂನಡ್ಕ ಬ್ರಾಂಚ್ ವತಿಯಿಂದ ಸನ್ಮಾನಿಲಾಯಿತು, ಹಾಗೂ ಎಸ್‌ಎಸ್‌ಎಫ್ ಗಾಂಧಿನಗರ ಯುನಿಟ್ ವತಿಯಿಂದ ಸಿದ್ದೀಕ್ ಗೂನಡ್ಕರವರನ್ನು ಶಾಲು ಹೊದಿಸಿ ಎಸ್‌ವೈಎಸ್ ನಾಯಕರಾದ ಸಿದ್ದೀಕ್ ಕಟ್ಟೆಕ್ಕಾರ್ ರವರು ವಿಶೇಷ ಸ್ಮರಣಿಕೆ ನೀಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಎಸ್‌ವೈಎಸ್ ನಾಯಕರುಗಳಾದ ಹಮೀದ್ ಬೀಜಕೊಚ್ಚಿ, ಸಿದ್ದೀಕ್ ಕಟ್ಟೆಕ್ಕಾರ್, ಶಮೀರ್ ಮೊಗರ್ಪಣೆ ಎಸ್‌ಎಸ್‌ಎಫ್ ದ. ಕ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಗೂನಡ್ಕ ಹಾಗೂ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ಗೂನಡ್ಕ, ಬಿಜೆಎಂ ಗೂನಡ್ಕ ಮಾಜಿ ಅಧ್ಯಕ್ಷರಾದ ಉಮ್ಮರ್ ಹಾಜಿ, ಬಿಜೆಎಂ ಗೂನಡ್ಕ ಕಾರ್ಯದರ್ಶಿ ಉಮ್ಮರ್ ಪುತ್ರಿ, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾದ ಸಾದಿಕ್ ಕುಂಭಕ್ಕೋಡ್, ಇಲ್ಯಾಸ್ ಹಿಮಮಿ, ಎಸ್‌ವೈಎಸ್ ಸುಳ್ಯ ಕಾರ್ಯದರ್ಶಿ ಹಾರಿಸ್ ಹಾಗೂ ಕೆಸಿಎಫ್ ನಾಯಕರಾದ ಮಜೀದ್ ಝುಹ್ರಿ, ಲತೀಫ್ ಸಲಾಲ, ಇಸ್ಮಾಯಿಲ್ ಮದನಿ , ಹಾಗೂ ಎಸ್‌ಎಸ್‌ಎಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್, ಎಸ್‌ಎಸ್‌ಎಫ್ ಸುಳ್ಯ ಡಿವಿಷನ್ ನಾಯಕರಾದ ಶಮೀರ್ ಮೊಗರ್ಪಣೆ, ಎಸ್‌ಎಸ್‌ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಜಾಬಿರ್ ಎಂ. ಬಿ ಗೂನಡ್ಕ, ಹಾರಿಸ್ ಝಮ್ ಝಮ್ ಗೂನಡ್ಕ,SSಈ ಗೂನಡ್ಕ ಯುನಿಟ್ ಅಧ್ಯಕ್ಷರಾದ ಉನೈಸ್ ಪಿ. ಯು, ಹಾಗೂ ಯುನಿಟ್ ಅಧ್ಯಕ್ಷರಾದ ರಮ್ಶಾದ್ ಕಲ್ಲುಗುಂಡಿ, ಎಸ್‌ಎಸ್‌ಎಫ್ ಗಾಂಧಿನಗರ ಯುನಿಟ್ ಕಾರ್ಯದರ್ಶಿ ಆರಿಫ್, ಎಸ್‌ಎಸ್‌ಎಫ್ ಏನಾವರ ಯುನಿಟ್ ಅಧ್ಯಕ್ಷರಾಗಿರುವ ಇರ್ಫಾನ್, ಅಝೀಝ್ ಮಾಸ್ಟರ್ ಹಾಗೂ ಹೆಚ್ಚಿನ ಕಾರ್ಯಕರ್ತರು, ಜಮಾಅತಿನ ಸದಸ್ಯರು ಭಾಗವಹಿಸಿದ್ದರು.
ಎಸ್‌ಎಸ್‌ಎಫ್‌ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಇಜಾಸ್ ಗೂನಡ್ಕ ರವರು ಸ್ವಾಗತಿಸಿ,ಎಸ್‌ಎಸ್‌ಎಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಕಲ್ಲುಗುಂಡಿ ರವರು ವಂದಿಸಿದರು.