ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕ್ಯಾಂಪ್ಕೋ ನಿಯಮಿತ ಇದರ ಸಹಭಾಗಿತ್ವದಲ್ಲಿ ನ.10 ರಂದು ಅಡಿಕೆ ಮತ್ತು ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ ನಡೆಯಲಿದ್ದು, ಕ್ಯಾಂಪ್ಕೋ ಮಂಗಳೂರು ಇದರ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಅಡಿಕೆ ಮತ್ತು ಕಾಳುಮೆಣಸು ಖರೀದಿ ಕೇಂದ್ರವನ್ನು ಉದ್ಘಾಟಿಸಲಿದ್ದು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್ ಮನ್ಮಥ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಮಂಗಳೂರು ಇದರ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಕ್ಯಾಂಪ್ಕೋ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಂ ಕೃಷ್ಣ ಕುಮಾರ್, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಉಪಸ್ಥಿತರಿರಲಿದ್ದಾರೆ.
- Thursday
- April 3rd, 2025