ಗ್ರಾಮೀಣ ಭಾಗದಲ್ಲಿ ಮಹಿಳಾ ಉದ್ಯೋಗ ಸೃಷ್ಟಿ ಯೋಜನೆಗೆ ಡಾಯ್ಚ ಗೆಸೆಲ್‌ಸ್ಚಾಫ್ಟ್ ಫರ್ ಇಂಟರ್ನ್ಯಾಷನಲ್ ಜುಸಮ್ಮೆನಾರ್ಬೀಟ್(Deutsche Gesellschaft für Internationale Zusammenarbeit)(ಜಿಐ ಝಡ್ ) ಮತ್ತು ಸೆಲ್ಕೋ ಇಂಡಿಯಾ ಸಂಸ್ಥೆ ಜೊತೆಯಾಗಿ ಶೇ.25ರ ರಿಯಾಯಿತಿಯಲ್ಲಿ ವಿಶೇಷವಾಗಿ ಸೆಲ್ಕೋ ಉಪಕರಣಗಳನ್ನು ಒದಗಿಸಲಿದೆ ಎಂದು ಸೆಲ್ಕೋ ಸಂಸ್ಥೆಯ ಹಿರಿಯ ಪ್ರಬಂಧಕರಾದ ಪ್ರಸಾದ್. ಬಿ ಹೇಳಿದರು.
ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಭಾಗವನ್ನು ಮುಕ್ತಗೊಳಿಸುವುದಲ್ಲದೆ ನವೀಕರಿಸಬಹುದಾದ ಇಂಧನದಿಂದ ಸುಸ್ಥಿರತೆಯನ್ನು ಕಾಪಾಡಬಹುದು. ತಂತ್ರಜ್ಞಾನ ಮುಖಾಂತರ ಒಳ್ಳೆಯ ಸಂಪನ್ಮೂಲ ಸೃಷ್ಟಿ ಮಾಡಿ ಗ್ರಾಮೀಣ ಆರ್ಥಿಕತೆಯ ಅಡಿಪಾಯವನ್ನು ಬಲಪಡಿಸಬಹುದು ಎಂಬ ದೃಷ್ಟಿಯಿಂದ ಈ ಯೋಜನೆ ಆರಂಭಿಸಲಾಗಿದೆ. ಬ್ಯಾಂಕ್ ಸಾಲ ಸೌಲಭ್ಯ ಪಡೆದು ವಿಶೇಷವಾಗಿ ಡಿಸೈನ್ ಮಾಡಲಾದ ಸೌರ ಶಕ್ತಿಯನ್ನು ಬಳಸಿ ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗ ಕೈಗೊಳ್ಳಬಹುದು. ರೋಟಿ, ಹಪ್ಪಳ ತಯಾರಿಕೆ, ಟೇಲರಿಂಗ್,ಕೋಲ್ಡ್ ಸ್ಟೋರೇಜ್, ಪ್ರಿಂಟರ್, ಹಿಟ್ಟಿನ ಗಿರಣಿ, ಹಾಲು ಕರೆಯುವ ಯಂತ್ರ,ಅಕ್ಕಿ ಗಿರಣಿ ಕಮ್ಮಾರನ ತಿದಿ,ಕಬ್ಬಿಣ ರಸ ತೆಗೆಯುವ ಉಪಕರಣ ಬಳಸಿ ಉದ್ಯೋಗ ಆರಂಭಿಸಬಹುದು. ಗ್ರಾಹಕರ ಅವಶ್ಯಕತೆಗಳಿಗೆ ಅನುಸಾರವಾಗಿ ಸೆಲ್ಕೋ ಉಪಕರಣವನ್ನು ಸಜ್ಜುಗೊಳಿಸುತ್ತದೆ ಎಂದರು. ಸದಾ ಸಮಾಜ ಮುಖಿಯಾಗಿ ತಮ್ಮ ಉತ್ತಮ ಉದ್ಯಮ ನಡೆಸುತ್ತಿರುವ ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಹರೀಶ್ ಹಂದೆಯವರಿಂದ ರಾಜ್ಯದ 3000ಕ್ಕೂ ಹೆಚ್ಚು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನೀಡಲಾಗಿದ್ದು ,ಈ ಸಂಸ್ಥೆಯ ಚಿಂತನೆಯ ಫಲವಾಗಿ ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗದ ಜನ ಸೌರ ಶಕ್ತಿ ಆಧಾರಿತ ಮೇಲಿನ ಗುಡಿ ಕೈಗಾರಿಕೆಗಳನ್ನು ಆರಂಭಿಸಿ ಆದಾಯ ಕಂಡುಕೊಂಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಯೋಜನೆ ಕೊನೆಗೊಳ್ಳಲಿದ್ದು ಗ್ರಾಮೀಣ ಭಾಗದ ಆಸಕ್ತರು ಇದರ ಲಾಭ ಪಡೆಯಬೇಕು ಎಂದರು.
- Friday
- November 1st, 2024