Ad Widget

ಮಿತ್ರ ಯುವಕ ಮಂಡಲ, ಕುರಲ್ ತುಳುಕೂಟದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ – ಗದ್ದೆಯಲ್ಲಿ ದಿನಪೂರ್ತಿ ಆಟವಾಡಿ ಖುಷಿ ಪಟ್ಟ ಮಕ್ಕಳು

. . . . . . . . .

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕೆಸರ್ಡ್ ಒಂಜಿ ದಿನ ನೀರಬಿದಿರೆ ಮದಕ ದಿ.ರಾಮಕೃಷ್ಣ ನಾಯಕ್ ರವರ ಗದ್ದೆಯಲ್ಲಿ ನ.6 ರಂದು ನಡೆಯಿತು.
ಕ್ರೀಡಾಕೂಟವನ್ನು ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧರ್ ಡಿ.ವಿ.ಉದ್ಘಾಟಿಸಿದರು. ಕ್ರೀಡಾಂಗಣ ಉದ್ಘಾಟನೆಯನ್ನು ಉಬರಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಬರಡ್ಕ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಚಿತ್ರಾಕುಮಾರಿ ಪಾಲಡ್ಕ, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಗುತ್ತಿಗಾರು ಗ್ರಾ.ಪಂ.ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ದುಗ್ಗಲಡ್ಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನಂಜಯ (ಮನು) ದುಗ್ಗಲಡ್ಕ ಭಾಗವಹಿಸಿದರು. ಕುರಲ್ ತುಳುಕೂಟದ ಅಧ್ಯಕ್ಷೆ ಶ್ರೀಮತಿ ನವ್ಯ ದಿನೇಶ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುರಲ್ ತುಳುಕೂಟದ ಗೌರವಾಧ್ಯಕ್ಷ ನಾರಾಯಣ ಟೈಲರ್, ಕೋಶಾಧಿಕಾರಿ ಶೇಖರ್ ಕುದ್ಪಾಜೆ, ಯುವಕ ಮಂಡಲದ ಗೌರವಾಧ್ಯಕ್ಷ ದಿನೇಶ್ ಕೊಯಿಕುಳಿ, ಅಧ್ಯಕ್ಷ ಚೇತನ್ ಕಲ್ಮಡ್ಕ, ಕಾರ್ಯದರ್ಶಿ ಪ್ರದೀಪ್ ಕೊಯಿಕುಳಿ,ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ ಗದ್ದೆಯನ್ನು ಒದಗಿಸಿದ ಶುಭಕರ ನಾಯಕ್,ಶ್ರೀಮತಿ ಚಂದ್ರಕಲಾ ವೇದಿಕೆಯಲ್ಲಿದ್ದರು.
ಗುಣನಿಧಿ ಕೊಯಿಕುಳಿ ಪ್ರಾರ್ಥಿಸಿದರು,ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮನೋಜ್ ಪಾನತ್ತಿಲ ವಂದಿಸಿದರು.ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading