Ad Widget

ಕುಸಿಯುತ್ತಿರುವ ಮಾನವೀಯ ಮೌಲ್ಯಗಳು

. . . . . . .

ಇಂದಿನ ಪ್ರಸುತ್ತ ಆಧುನಿಕ ಯುವ ಜನಾಂಗವು ಹೊಸ ಹೊಸ ರೀತಿಯ ದೂರಲೋಚನೆಗೆ ತಮ್ಮನ್ನು ತೊಡಿಗಿಸಿಕೊಳ್ಳುವ ಪರಿಪಾಠವನ್ನು ಅವಲಂಬಿಸಿವೆ. “ಹಣಕ್ಕಿರುವ ಬೆಲೆ ಮಾನವೀಯ ಮೌಲ್ಯಗಳಿಗೆ ಇಲ್ಲ ಇಂದು ” ಈ ಮಾತು ಸತ್ಯಕರವಾದ ಸಂಗತಿ. ಬಹುತೇಕ ಮಂದಿ ಮಾನವೀಯ ಗುಣಗಳನ್ನು ಮರೆತಿದ್ದಾರೆ ವಕ್ತಿ ಎಷ್ಟೇ ಸಿರಿವಂತನಾದರು ಅವನಲ್ಲಿ ಮಾನವೀಯ ಗುಣಗಳು ಇಲ್ಲದಿದ್ದರೆ ಏನು ಪ್ರಯೋಜನ. ಎಲ್ಲಾ ಇದ್ದು ಏನು ಇಲ್ಲದಂತೆ. ಮಾನವೀಯತೆಯೆಂಬುದು ಸಹ – ಸಂಬಂಧಗಳಲ್ಲೂ ಕುಂಠಿತಗೊಳ್ಳುತ್ತಿದೆ ಒಬ್ಬನ್ನೊಬ್ಬರನ್ನು ತಿಳಿದು -ಅರಿತು ಕೊಳ್ಳುವ ಬಾಂಧವ್ಯಗಳು ಇಂದು ಜಂಗಮವಾಣಿಯಂತಹ ಸಂವಹನ ಮೂಲಕ ನಡೆಯುತ್ತಿದೆ. ಇದರಿಂದ ಕೊಡು -ಕೊಳ್ಳುವಿಕೆವೆಂಬ ಪ್ರೀತಿ-ವಾತ್ಸಲ್ಯ ಬಾಂಧವ್ಯಗಳು ಮರೆಯಾಗುತ್ತಿವೆ. ಹೆಚ್ಚುತ್ತಿರುವ ತಂತ್ರಜ್ಞಾನ ಬದುಕಿನ ಶೈಲಿ, ಆಧುನಿಕ ಜೀವನ ಶೈಲಿ, ಆಡಂಬರದ ಬದುಕು.ಅತಿಯಾದ ಬುದ್ದಿವಂತಿಕೆ ಯು ಕೂಡ ಆತನನ್ನು ಮಾನವೀಯ ಮೌಲ್ಯ ಗಳಿಂದ ಸ್ವಾರ್ಥ ಪರ ಚಿಂತನೆಯತ್ತ ಅಂದರೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುವುದಿಲ್ಲ. ಕಾರಣ ಸ್ವಾರ್ಥ ತಾನೊಬ್ಬನೇ ಬೆಳೆಯಬೇಕೆಂಬ ಅಹಂ ಭಾವನೆ ಪ್ರಸುತ್ತ ಯುಗದ ಆಯಾಮವಾಗಿದೆ.
ಬದುಕಿನ ಪ್ರತಿಯೊಂದು ಸಣ್ಣ ಪುಟ್ಟ ಹೆಜ್ಜೆಯಲ್ಲೂ ಮಾನವೀಯ ಮೌಲ್ಯಗಳು ಬೆಳಸಿಕೊಳ್ಳುವುದು ಮುಖ್ಯ ಉದಾಹರಣೆಗೆ ರಸ್ತೆಯಲ್ಲೊಂದು ಅಪಘಾತವಾದಗ ಫೋಟೋ ತೆಗಿತಾರೆ ವಿನಃ ಅವರನ್ನು ಆಸ್ಪತ್ರೆಗೆ ಅವರನ್ನು ದಾಖಲಿಸುವಂತಹ ಯಾವುದೇ ಕಾರ್ಯಗಳನ್ನು ಮಾಡಲು ಯಾರು ಮುಂದೆ ಬರುವುದಿಲ್ಲ. ಎಲ್ಲಿದೆ ಮಾನವೀಯತೆ ಇಂದು ….? ಎಲ್ಲಿ ಗಾಯಗೊಂಡ ವ್ಯಕ್ತಿ ತನಗೆ ಹೊರೆಯಾಗುತ್ತನೋ ಎಂಬ ಸ್ವಾರ್ಥ ಪರ ಚಿಂತನೆ ಮನುಜನದ್ದು. ಕಷ್ಟದಲ್ಲಿದ್ದಾಗ ಸಹಕರಿಸಿ ಬದಲಾಗಿ ಸ್ವಾರ್ಥಿಯಾಗಿ ಯೋಚಿಸದಿರಿ.
ನಾವು ಅಂದರೆ ನಮ್ಮ ಸುತ್ತ ಮುತ್ತಲಿನ ಸಮಾಜ, ಅದರಲ್ಲೂ ವಿಶೇಷವಾಗಿ ಯುವ ಸಮಾಜ, ಯುವ ಮೌಲ್ಯ ಗಳನ್ನು ಕಳೆದುಕೊಳ್ಳುತಿದ್ದೇವೆ. ಒಂದು ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಬೇಕಾದಂತಹ ಯಾವುದೇ ಮೌಲ್ಯಗಳನ್ನು ಕಾಣಲಾಗುತ್ತಿಲ್ಲ ಪ್ರೀತಿ, ವಾತ್ಸಲ್ಯ ,ಮಮತೆ,ಒಲವು,ಸ್ನೇಹ, ಒಡನಾಟ, ಸೌಹಾರ್ದ, ಸಹಯೋಗ, ಸಹಬಾಳ್ವೆ, ಹೀಗೆ ಒಂದು ಸುಸ್ಥಿರವಾದ ಹಾಗೂ ಸುಭದ್ರವಾದ ಮಾನವೀಯ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಪರಿಕರಗಳು, ಸಲಕರಣೆಗಳೂ, ಕಲುಷಿತವಾಗುತ್ತಿರುದನ್ನು ಕಾಣುತ್ತಿದ್ದೇವೆ. ದುರಂತವೆಂದರೆ ಯುವ ಪೀಳಿಗೆಯು ಈ ಮಾಲಿನ್ಯದ ಸೋಂಕಿಗೆ ಬಲಿಯಾಗುತ್ತಿದೆ. ಈ ಪೀಳಿಗೆಯ ಹೆಜ್ಜೆ ಗುರುತುಗಳನ್ನೇ ಅನುಸರಿಸಲು ಸಿದ್ದವಾಗುತ್ತಿರುವ ನವ ಸಂತತಿಯ ಭವಿಷ್ಯವನ್ನು ನೆನೆದರೆ ಆತಂಕ ಉಂಟಾಗುವಂತಾಗುತ್ತಿದೆ.

✍️ ಕಿಶನ್ ಎಂ. ಪೆರುವಾಜೆ ಪವಿತ್ರನಿಲಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!