ಉಬರಡ್ಕ ಗ್ರಾಮದ ಮಾಣಿಬೆಟ್ಟು ನಿವಾಸಿ ದಿ.ಕೃಷ್ಣ ಮಣಿಯಾಣಿ ಯವರ ಪತ್ನಿ ರತ್ನಾವತಿ ಯವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಇಂದು ನಡೆದಿದೆ.
ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿ ಮನೆಗೆ ಬೆಂಕಿ ತಗಲುವುದನ್ನು ತಪ್ಪಿಸಲಾಯಿತು. ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ, ಸೌದೆ, ಇನ್ನೀತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.