ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ತಾಲೂಕು ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ಅಚರಿಸಲಾಯಿತು. ಅಧ್ಯಕ್ಷರಾಗಿ ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತಿನ ಮಾಜಿ ಕಾರ್ಯದರ್ಶಿ ಮಹಾಲಕ್ಷ್ಮಿ ಕೊರಬಡ್ಕ, ಜಿಲ್ಲಾ ಮಹಿಳಾ ಖಜಾಂಜಿ ಚಂದ್ರಾಕ್ಷಿ ಜೆ ರೈ, ಹಾಗೂ ಜಿಲ್ಲಾ ಮಹಿಳಾ ಒಕ್ಕೂಟದ ಗೌರವಧ್ಯಕ್ಷೆ ಹರಿಣಿ ಸದಾಶಿವ ಮತ್ತು ಮಹಿಳಾ ಒಕ್ಕೂಟದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಹೇಮಾ ವೇಣುಗೋಪಾಲ್ ಸ್ವಾಗತಿಸಿ, ಶಿಲ್ಪಾ ಸುದೇವ್ ವಂದಿಸಿದರು. ಲಲಿತ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.
- Sunday
- November 24th, 2024