ಮಂಗಳೂರಿನಲ್ಲಿ ನಡೆದ ೬೭ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ
ಛಾಯಾಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುವುದರ ಜೊತೆಗೆ ಸಾಮಾಜಿಕವಾಗಿಯೂ ಹಲವಾರು ಕೆಲಸಗಳನ್ನು ನಡೆಸಿಕೊಂಡು ಬರುತ್ತಿರುವ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಸಂಘಟನೆಗೆ ನ.1ರಂದು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು ಮತ್ತು ವಿವಿಧ ಗಣ್ಯರ ಸಮ್ಮುಖದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾಳರವರು ಸಂಘಟನೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಅಸೋಸಿಯೇಷನ್ನ ಸಲಹಾ ಸಮಿತಿ ಸಂಚಾಲಕ ನವೀನ್ ಕುದ್ರೋಳಿ, ಸಲಹಾ ಸಮಿತಿ ಸದಸ್ಯರಾದ ಕೀರ್ತಿ ಮಂಗಳೂರು, ವಿಠಲ ಚೌಟ, ಮಾಜಿ ಜಿಲ್ಲಾಧ್ಯಕ್ಷರುಗಳಾದ ಕರುಣಾಕರ ಕಾನಂಗಿ, ಗೋಪಾಲ್ ಸ್ಟುಡಿಯೋದ ಗೋಪಾಲ್ ಸುಳ್ಯ, ವಾಸುದೇವ ರಾವ್, ಜಗನ್ನಾಥ್ ಶೆಟ್ಟಿ, ವಿಲ್ಸನ್ ಗೊನ್ಸಾಲ್ವಿಸ್, ಶ್ರೀಧರ್ ಶೆಟ್ಟಿಗಾರ್, ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಮತ್ತು ಲೋಕೇಶ್ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ, ಜೊತೆ ಕಾರ್ಯದರ್ಶಿಗಳಾದ ಅಜಯ್ ಮಂಗಳೂರು ಮತ್ತು ವಾಮನ್ ಪಡುಕೆರೆ, ಜಿಲ್ಲಾ ಸಂಘಟನೆ ಕಾರ್ಯದರ್ಶಿಗಳಾದ ಜಯಕರ್ ಸಾಲ್ಯಾನ್ ಮತ್ತು ಹೆರಿಕ್ ಡಿಸೋಜ, ಕ್ರೀಡಾ ಕಾರ್ಯದರ್ಶಿಗಳಾದ ರಾಜೇಶ್ ತೊಕ್ಕೊಟ್ಟು ಮತ್ತು ಶ್ರೀನಿವಾಸ್ ಐತಾಳ್, ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕಟೀಲು, ಛಾಯಾ ಕಾರ್ಯದರ್ಶಿ ಅಮೃತ್ ಬೀಜಾಡಿ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಉಮೇಶ್ ಮದ್ದಡ್ಕ ಮತ್ತು ಸುಳ್ಯ ವಲಯದ ಅಧ್ಯಕ್ಷ ಹರೀಶ್ ಪಿ.ರಾವ್, ನಿಕಟಪೂರ್ವ ಅಧ್ಯಕ್ಷ ಸುಧಾಕರ್ ರೈ .ಬೆಳ್ಳಾರೆ ಸಹಿತ 14 ವಲಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಂಘಟನೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.