ಅಜ್ಜಾವರ : ಪ್ರತಾಪ ಯುವಕ ಮಂಡಲ ವತಿಯಿಂದ “ಕನ್ನಡದ ಓಟ” ಕಾರ್ಯಕ್ರಮ
ಅಜ್ಜಾವರದ ಪ್ರತಾಪ ಯುವಕ ಮಂಡಲ ಇದರ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ “ಕನ್ನಡದ ಓಟ” ಕಾರ್ಯಕ್ರಮ ಗ್ರಾಮ ಪಂಚಾಯತ್ ಅಜ್ಜಾವರದ ಬಳಿಯಿಂದ ಸರಕಾರಿ ಪ್ರೌಢಶಾಲೆ ಅಜ್ಜಾವರದವರೆಗೆ ನಡೆಯಿತು.
ಕಾರ್ಯಕ್ರಮವನ್ನು ಕನ್ನಡದ ಓಟಕ್ಕೆ ರಾಘವ ಅತ್ಯಾಡಿ ಪೂರ್ವಾಧ್ಯಕ್ಷರು ಪ್ರತಾಪ ಯುವಕ ಮಂಡಲ ಅಜ್ಜಾವರ ಹಾಗೂ ಹಿರಿಯ ಕ್ರೀಡಾಪಟು ಚಾಲನೆ ನೀಡಿದರು. ಕನ್ನಡದ ಓಟದಲ್ಲಿ
ಸರಕಾರಿ ಪ್ರೌಢಶಾಲೆ ಅಜ್ಜಾವರ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ ಹಾಗೂ ಮೇರಾಥಾನ್ ಫ್ರೆಂಡ್ಸ್ ಸುಳ್ಯ ಇದರ ಸದಸ್ಯರಾದ ಮಹೇಶ್ ಹಸ್ತ ಜಾರ್ಖಂಡ್ ರಾಷ್ಟ್ರೀಯ ಮೇರಾಥಾನ್ ಓಟಗಾರ, ಕು| ಸುಶ್ಮಿತಾ ಅಡ್ತಲೆ ಹಾಗೂ
ಕು| ಚಿತ್ರ ಲೇಖಾ
ರಾಜ್ಯ ಮಟ್ಟದ ಮೇರಾಥಾನ್ ಓಟಗಾರ್ತಿಯರು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಭಾಗವಹಿಸಿದರು ಸುಮಾರು ಎರಡು ಕಿಲೋಮಿಟರ್ ಗಿಂತಲು ಹೆಚ್ಚು ನೂರಾರು ವಿಧ್ಯಾರ್ಥಿಗಳು ನಾಗರಿಕರು ಶಿಕ್ಷಕ ವೃಂದ ಈ ಓಟದಲ್ಲಿ ಭಾಗವಹಿಸಿದರು. ಸಭಾ ಕರ್ಯಾಕ್ರಮವು ಅಡ್ಪಂಗಾಯ ಶಾಲಾ ಮೈದಾನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ ವಹಿಸಿದ್ದರು. ದೀಪ ಬೆಳಗುವ ಮೂಲಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ್ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೌಢ ಶಾಲೆಯ ಮುಖ್ಯ ಶಿಕ್ಷಕರು ಪ್ರಾಸ್ತಾವಿಕ ಮಾತನಾಡಿ ಕನ್ನಡ ನಾಡು ನುಡಿಯ ಕುರಿತು ವಿವರಿಸಿ ಕನ್ನಡವನ್ನು ಪ್ರೀತಿಸೋಣ ಬೆಳೆಸೋಣ ಎಂದು ಹೇಳಿದರು. ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ಮಾತಾನಾಡಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಕನ್ನಡ ನಾಡು ನುಡಿಗಳನ್ನು ಬೆಳೆಸಬೇಕು ಮತ್ತು ಸರಕಾರ ಇದೀಗ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ರೀತಿಯಲ್ಲಿ ಸರಕಾರಿ ಶಾಲೆಗಳು ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಸರಕಾರಿ ಕನ್ನಡ ಶಾಲೆಗಳ ಬಗ್ಗೆ ಗುಣಗಾನ ಮಾಡಿದರು. ವೇದಿಕೆಯಲ್ಲಿ ಕನ್ನಡ ಪರಿಷತ್ ಜಿಲ್ಲಾ ಸಮಿತಿ ಸದಸ್ಯರಾದ ರಾಮಚಂದ್ರ ಪಲ್ಲತ್ತಡ್ಕ ,ಗೋಪಿನಾಥ್, ಧನಲಕ್ಷ್ಮಿ ,ತೇಜಾವತಿ , ಚಿನಿಯ ಕಲ್ತಡ್ಕ, ಶಶ್ಮಿ ಭಟ್ , ಗ್ರಾಮ ಪಂಚಾಯತ್ ಸದಸ್ಯೆ ಬೇಬಿ ಅಡ್ಪಂಗಾಯ , ಗ್ರಾ ಪಂ ಸದಸ್ಯ ರವಿರಾಜ್ ಕರ್ಲಪ್ಪಾಡಿ , ರಾಘವ ಅತ್ಯಾಡಿ ರಾಷ್ಟ್ರೀಯ ಓಟಗಾರ ಮಹೇಶ್ ಹಸ್ತ ,ಕು| ಸುಶ್ಮಿತಾ ಅಡ್ತಲೆ ,ಕು| ಚಿತ್ರ ಲೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪ್ರತಾಪ ಯುವಕ ಮಂಡಲದ ಸದಸ್ಯರಾದ ಅನಿಲ್ ರಾಜ್ , ಲೋಕೇಶ್ ,ಹರೀಶ್ , ನವೀನ್ , ಗೌರೀಶ ಮತ್ತಿತರರು ಉಪಸ್ಥಿತರಿದ್ದರು.