Ad Widget

ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸೆ.13ರಂದು ಬೊಮ್ಮಾರು ಶಿವಾಮೃತ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ದಿವಾಕರ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಇದೇ ಸಂದರ್ಭದಲ್ಲಿ ಯುವ ಹೈನುಗಾರ ಪ್ರಸಾದ್ ಜೋಗಿಮೂಲೆ ಮತ್ತು ನಿವೃತ್ತ ದೈ.ಶಿ.ಶಿ. ಲಕ್ಷ್ಮೀಶ ರೈ ಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದ.ಕ.ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್,...

ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾ ಅಧಿಕಾರ ಸ್ವೀಕಾರ

ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾರವರು ಸೆ.12ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ತಾಲ್ಲೂಕು ವಿಸ್ತರಣಾಧಿಕಾರಿ ಶುಭಾ ಎ. ಹಾಗೂ ತಾಲೂಕು ನಿಲಯಗಳ ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರು ಗೀತಾರವರನ್ನು ಹೂವು ನೀಡಿ ಸ್ವಾಗತಿಸಿದರು.11 ವರ್ಷಗಳಿಂದ ಪುತ್ತೂರಿನಲ್ಲಿ ನಿಲಯ ಪಾಲಕರಾಗಿದ್ದ ಗೀತಾರವರು, ಅದಕ್ಕಿಂತ ಮೊದಲು ಬೆಳ್ತಂಗಡಿಯಲ್ಲಿ 9ವರ್ಷ ನಿಲಯಪಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ತಾಲ್ಲೂಕು...
Ad Widget

ವಲಯ ಮಟ್ಟದ ಪ್ರತಿಭಾ ಕಾರಂಜಿ-ಮರ್ಕಂಜ ಪ್ರೌಢಶಾಲೆ ಸಮಗ್ರದಲ್ಲಿ ದ್ವಿತೀಯ

ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸೆ.13ರಂದು ನಡೆದ ಅರಂತೋಡು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರ್ಕಂಜ ಪ್ರೌಢಶಾಲೆ ಸಮಗ್ರ ದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮರ್ಕಂಜ ಪ್ರೌಢಶಾಲೆಯ ವಿದ್ಯಾರ್ಥಿ ಗಳಾದ ಶ್ರೀವಾಸ್ತವ್ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, ಜನನಿ ಐ.ಟಿ. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ಗಾಯನ ಬಿ.ಡಿ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಹವ್ಯಶ್ರೀ ಕನ್ನಡ...

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ.

ಸೆ.14 ರಂದು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿದ್ದು ತಂಡದ ಆಟಗಾರರಾದ ಮನು ಶ್ರೀನಿವಾಸ್ ನಾಯ್ಕ (ದ್ವಿತೀಯ ಕಲಾ ವಿಭಾಗ ) ತುಕಾರಾಮ್ ಮಣಿಗೆಣಪ್ಪ ಮೋಟೆ (ಪ್ರ ಕಲಾ ವಿಭಾಗ )ಇವರು ಮಂಡ್ಯದಲ್ಲಿ ನಡೆಯಲಿರುವ...

ನಾಲ್ಕೂರು : ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು – ವಿಪತ್ತು ನಿರ್ವಹಣಾ ತಂಡ ಸಹಕಾರ

ಸುಳ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಡಗಲ್ಲು ಕಲ್ಲಾಜೆ ಸಮಿಪ ಗುಡ್ಡಕುಸಿತದ ಪರಿಣಾಮ ಕೆಲವು ಬೃಹತ್ ಮರಗಳು ರಸ್ತೆಗೆ ವಾಲಿನಿಂತಿದ್ದು ಅಪಾಯವನ್ನು ಆಹ್ವಾನಿಸುತ್ತಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಇಂದು ತೆರವು ಮಾಡಿದರು. ಅರಣ್ಯ ಇಲಾಖೆಯ ನಾಲ್ಕೂರು ವಿಭಾಗದ ಅರಣ್ಯಾಧಿಕಾರಿ ಸದಾಶಿವ, ಅರಣ್ಯ ರಕ್ಷಕ...

ಸಹನಾ ಕಾಂತಬೈಲುಗೆ ಗೌರಮ್ಮ ದತ್ತಿ ಪ್ರಶಸ್ತಿ ಪ್ರಕಟ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ಬಾರಿ ಸಹನಾ ಕಾಂತಬೈಲು ರಚಿಸಿದ 'ಇದು ಬರಿ ಮಣ್ಣಲ್ಲ' ಲಲಿತ ಪ್ರಬಂಧಕ್ಕೆ ಲಭಿಸಿದೆ. ಗೌರಮ್ಮರವರ ಪುತ್ರ ಬಿ.ಜಿ.ವಸಂತ ಅವರು ಕೊಡಗಿನ ಮಹಿ ಲೇಖಕಿಯರು ಪ್ರಕಟಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿಗೌರವಿಸುವ ಸಲುವಾಗಿ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ....

ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಭವಾನಿಶಂಕರ ಅಡ್ತಲೆಯವರಿಗೆ ಕಛೇರಿ ಅಧೀಕ್ಷಕರಾಗಿ ಮುಂಭಡ್ತಿ

ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರ ಆಡಳಿತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ಭವಾನಿಶಂಕರ ಅಡ್ತಲೆಯವರು ಕಛೇರಿ ಅಧೀಕ್ಷಕರಾಗಿ ಮುಂಭಡ್ತಿ ಹೊಂದಿರುತ್ತಾರೆ. ಇವರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯಾಗಿ 1999ರಿಂದ ಸೇವೆ...

ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಹಿಂದಿ ದಿವಸ್ ಆಚರಣೆ

ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಸೆ 14ರಂದು ಹಿಂದಿ ದಿವಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಹರಿಣಿ ಪುತ್ತೂರಾಯ ವಹಿಸಿದ್ದರು. ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿ ಭಾಷೆಯು ರಾಷ್ಟ್ರೀಯ ಏಕತೆಯನ್ನು ಒಗ್ಗೂಡಿಸುವ ಮೂಲಕ ನಮ್ಮನ್ನು ಬಂಧಿಸುತ್ತದೆ.ದೇಶದ ಏಕೀಕರಣ,ಏಕತೆಯನ್ನು ಸಾಧಿಸಲು ಭಾಷೆಯ ಮೂಲಕ ಸಾಧ್ಯ.ಸಂವಹನ ಭಾಷೆಯಾಗಿ ಸಂಸ್ಕೃತಿ ಯ ಅರಿವಾಗಲು ಭಾಷೆ ಪ್ರಮುಖ...

ಐವರ್ನಾಡು ಹಾಲು ಉತ್ಪಾದಕ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಐವರ್ನಾಡು ಹಾಲು ಉತ್ಪಾದಕ ಸಹಕಾರಿ ಸಂಘ ನಿಯಮಿತ ವಾರ್ಷಿಕ ಸಾಮಾನ್ಯ ಸಭೆಯು ಬಾಲಚಂದ್ರ ಪಲ್ಲತಡ್ಕ ಅವರ ಅಧ್ಯಕ್ಷತೆಯಲ್ಲಿನಡೆಯಿತು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್, ದಕ್ಷಿಣ ಕನ್ನಡ ಹಾಲು ಒಕ್ಕೂಟ ಸಹಾಯಕ ವ್ಯವಸ್ಥಾಪಕಿ ಡಾ.ಪೂಜಾ ಜಿ.ಎಂ., ಹಾಲು ಉತ್ಪಾದಕ ಸಂಘದ ಉಪಾಧ್ಯಕ್ಷ ಎನ್ ವಸಂತ ಕುಮಾರ ಭಟ್ ನಾಟಿಕೇರಿ, ಕಾರ್ಯದರ್ಶಿ ಹಿರಿಯಣ್ಣ...

ಎಂಜಿನಿಯರ್ಸ್ ಡೇ ಅಂಗವಾಗಿ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಹಿರಿಯ ಇಂಜಿನಿಯರ್ ಸುಮಿತ್ರ ಗೌಡರಿಗೆ ಸನ್ಮಾನ

ಎಂಜಿನಿಯರ್ಸ್ ಡೇ ಅಂಗವಾಗಿ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಸುಳ್ಯದ ಹಿರಿಯ ಸಿವಿಲ್ ಎಂಜಿನಿಯರ್ ಡಿ.ಎಂ.ಸುಮಿತ್ರ ಗೌಡ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೋ ಮುರಳೀಧರ್ ರೈ, ರೋ ಬಾನು ಪ್ರಕಾಶ್, ರೋ ಗಿರೀಶ್ ನಾರ್ಕೋಡ್. ರೋ ಶಿವಪ್ರಸಾದ್, ರೋ ಮುಕುಂದ ನಾರ್ಕೊಡ್ ,ರೋ ಪ್ರೀತಂ ಡಿ. ಕೆ.,...
Loading posts...

All posts loaded

No more posts

error: Content is protected !!