Ad Widget

ಆಲೆಟ್ಟಿ: ಒಡಿಯೂರು ಗ್ರಾಮವಿಕಾಸ ಯೋಜನೆಯ ಮಾಸಿಕ ಸಭೆ

ಆಲೆಟ್ಟಿ ಪಂಚಾಯತ್ ಸಭಾಭವನದಲ್ಲಿ ಆಲೆಟ್ಟಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಘಟಸಮಿತಿಯ ಮಾಸಿಕ ಸಭೆ ಸೆ.18 ರಂದು ನಡೆಯಿತು. ಘಟಸಮಿತಿಯ ಅಧ್ಯಕ್ಷೆ ಶ್ರೀಮತಿ ಜಾನಕಿ ಮೈಂದೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಸಂಯೋಜಕಿ ಶ್ರೀಮತಿ ರೇವತಿ ಮೊರಂಗಲ್ಲು, ಕಾರ್ಯದರ್ಶಿ ಮರಿಯಮ್ಮ ಜತೆ ಕಾರ್ಯದರ್ಶಿ ಗೋಪಾಲ ಗುಂಡ್ಯ, ಉಪಾಧ್ಯಕ್ಷೆ ಶ್ರೀಮತಿ ಕಾವೇರಿ, ಸಂಘಟನಾ ಕಾರ್ಯದರ್ಶಿ ರೂಪಾನಂದ ಗುಂಡ್ಯ,...

ಐವರ್ನಾಡು: ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

ಐವರ್ನಾಡು ಗ್ರಾಮದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಪ್ರಾರಂಭವಾಗಿದ್ದು ಅದನ್ನು ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್ ಅಂಗಾರರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ ಕೆ., ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಐವರ್ನಾಡು...
Ad Widget

ಕನ್ನಡ ಪಯಸ್ವಿನಿ ಪ್ರಶಸ್ತಿ ಪುರಸ್ಕೃತ ಡಾ.ಅನುರಾಧಾ ಕುರುಂಜಿಯವರಿಗೆ ಸನ್ಮಾನ

ಸುಳ್ಯದ ಖ್ಯಾತ ಲೇಖಕಿ, ವಿಮರ್ಶಕಿ, ಸಂಪನ್ಮೂಲವ್ಯಕ್ತಿ , ಇತ್ತೀಚೆಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪಡೆದ ಡಾ. ಅನುರಾಧಾ ಕುರುಂಜಿ ಅವರಿಗೆ ಸೆ.19ರಂದು ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಕುರುಂಜಿ ಕುಟುಂಬದ ಯಜಮಾನ ಬಾಲಣ್ಣ ಗೌಡ,ಗುರುಸ್ವಾಮಿಗಳು, ಅಯ್ಯಪ್ಪ ಸೇವಾ ಮಂದಿರದ ಧರ್ಮದರ್ಶಿ ಶಿವಪ್ರಕಾಶ್ ಅಡ್ಪಂಗಾಯ, ನ.ಪಂ.ಸದಸ್ಯೆ ಶೀಲಾವತಿ ಕುರುಂಜಿ ಹಾಗೂ ಅಯ್ಯಪ್ಪ ವೃತಧಾರಿಗಳು ಈ...

ದೇವ ಗೆಳೆಯರ ಬಳಗದ ವತಿಯಿಂದ ಸಮೀಕ್ಷಾ ಮೋಟ್ನೂರು ಚಿಕಿತ್ಸೆಗೆ ಧನಸಹಾಯ

ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರಿನ ವಳಲಂಬೆಯ ಸಮೀಕ್ಷಾ ಮೋಟ್ನೂರು ಅವರ ಚಿಕಿತ್ಸೆಗೆ ದೇವ ಗೆಳೆಯರ ಬಳಗದ ವತಿಯಿಂದ ಧನಸಹಾಯ ನೀಡಲಾಯಿತು. ಗೆಳೆಯರ ಬಳಗ ಹಾಗೂ ಊರವರಿಂದ ಸಂಗ್ರಹಿಸಿದ 13,650 ರೂ. ಗಳನ್ನು ಸೆ. 19 ರಂದು ಮನೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪ್ರಧಾನಿ ಹುಟ್ಟುಹಬ್ಬದ ಪ್ರಯುಕ್ತ ಮುರುಳ್ಯ ಅಂಗನವಾಡಿ ಕೇಂದ್ರವನ್ನು ದತ್ತುತೆಗೆದುಕೊಂಡ ಬಿಜೆಪಿ ಮಹಿಳಾ ಮೋರ್ಚಾ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೆ. 17ರಂದು ಆದರ್ಶ ಅಂಗನವಾಡಿ ಅಭಿಯಾನದಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಮುರುಳ್ಯ ಗ್ರಾಮದ ಶಾಂತಿನಗರ ಅಂಗನವಾಡಿಯನ್ನು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ವತಿಯಿಂದ ದತ್ತು ತೆಗೆದುಕೊಳ್ಳಲಾಯಿತು. ಅಂಗನವಾಡಿಯಲ್ಲಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ನಂತರ ಪ್ರಧಾನಮಂತ್ರಿಯವರ ಹುಟ್ಟು ಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳು...

ಸೆ.26 ರಿಂದ 30 ರವರೆಗೆ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ

ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯದ ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ಮಕ್ಕಳ ವಿಭಾಗದಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರವನ್ನು ದಿನಾಂಕ 26.09.2022 ರಿಂದ 30.09.2022 ರ ವರೆಗೆ ಸುಳ್ಯದ ಅಂಬಟೆ ಅಡ್ಕದಲ್ಲಿರುವ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಆಸ್ಪತ್ರೆಯ ಪ್ರಸೂತಿ ಮತ್ತು...

ಗುತ್ತಿಗಾರು : ರಿಕ್ಷಾ ಚಾಲಕರಿಂದ ಶ್ರಮದಾನ

ಗುತ್ತಿಗಾರು ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದ ಅಂಗಡಿ ಕಟ್ಟಡದ ಮುಂಭಾಗದಲ್ಲಿ ಶ್ರಮದಾನದ ಮೂಲಕ ರಿಕ್ಷಾ ಚಾಲಕರು ಸ್ವಚ್ಛತಾ ಕಾರ್ಯ ಕೈಗೊಂಡರು. ರಿಕ್ಷಾ ಚಾಲಕರ ಮಾದರಿ ಕಾರ್ಯಕ್ಕೆ ವರ್ತಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗೆ ಮನಸ್ವಿನಿ ಬಡ್ಡಡ್ಕ ಆಯ್ಕೆ

ಪೋಲೀಸ್ ಇಲಾಖೆಯ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ( Scene Of Crime Officer) ಹುದ್ದೆಗೆ ಮನಸ್ವಿನಿ ಎನ್.ಕೆ. ಬಡ್ಡಡ್ಕ ಆಯ್ಕೆಯಾಗಿದ್ದು ಸೆ.19 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರೋಟರಿಯಲ್ಲಿ ಪ್ರಾಥಮಿಕ, ಉಜಿರೆಯ ಎಸ್.ಡಿ.ಎಂ.ಸಿ.ಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಬಿಎಸ್ಸಿ ಪದವಿ ಹಾಗೂ ಗುಜರಾತ್ ನ ಫೋರೆನ್ಸಿಕ್ ಯೂನಿವರ್ಸಿಟಿಯಲ್ಲಿ...

ಗುತ್ತಿಗಾರು : ಅಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ ಮತ್ತು ಸಂಟ್ ಮೇರಿಸ್ ಚರ್ಚ್ ಗುತಿಗಾರು ಸಂಯುಕ್ತವಾಗಿ ಗುತಿಗಾರು ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ. 75 ನೇ ಸ್ವಾತಂತ್ರ್ಯತ್ಸವ ಪ್ರಯುಕ್ತ “ಪ್ರಜಾಪ್ರಭುತ್ವ ದೇಶ, ನನ್ನ ಭಾರತ ” ಎಂಬ ವಿಷಯದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಸೆ.18 ರಂದು ಗುತಿಗಾರು ಚರ್ಚಿನ ಸಭಾ ಭವನದಲ್ಲಿ...

ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ ಅಧಿಕಾರ ಸ್ವೀಕಾರ

ಸುಳ್ಯದ ಬಿ. ಜೆ. ಪಿ. ಮುಂದಾಳು, ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎ. ವಿ. ತೀರ್ಥರಾಮರನ್ನು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರವು ನೇಮಕ ಮಾಡಿದ್ದು, ಇಂದು ಮಂಗಳೂರಿನ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ.ಮುಖಂಡರುಗಳಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಸುಭೋದ್ ಶೆಟ್ಟಿ ಮೇನಾಲ,ರಾಕೇಶ್...
Loading posts...

All posts loaded

No more posts

error: Content is protected !!