ಸುಳ್ಯ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ರಿನೀವಲ್ ಮಾಡುವ ಕ್ಯಾಂಪ್ ಸೆ.27 ರಂದು ಜಂಟಿಯಾಗಿ ನಡೆಯಿತು.
ತಾಲ್ಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, ತಾಲ್ಲೂಕು ಪಂಚಾಯತ್ ನ ಎಂ.ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನ ಇಲಾಖೆಯಯು.ರ್.ಡಬ್ಲ್ಯೂ ಪ್ರವೀಣ್ ನಾಯಕ್, ಆರೋಗ್ಯ ಅಧಿಕಾರಿ ಬಸವರಾಜ್, ವಿರ್.ಡಬ್ಲ್ಯೂ ರವರಾದ ಪುಷ್ಯಶ್ರೀ, ದಿನೇಶ್, ಷಣ್ಮುಖ, ರಾಜೇಶ್ವರಿ, ರೇಖಾ, ಕಾವೇರಿ, ಮೀನಾಕ್ಷಿ, ಆಶೀಸ್, ಧರ್ಮಪಾಲ, ಪ್ರಶಾಂತ, ಹರಿಣಿ, ರಂಜನ್, ಲಾವಣ್ಯ, ಉಮ್ಮರ್, ರಂಜನಿ ಮತ್ತು ದಾದಿ ನಯನ ಮೊದಲಾದವರು ಉಪಸ್ಥಿತರಿದ್ದರು.
ವೈದ್ಯಾಧಿಕಾರಿ ಡಾ. ಕರುಣಾಕರ್ ನೇತ್ರತ್ವದಲ್ಲಿ ಡಾ. ಪದ್ಮನಾಭ, ಡಾ.ಹಿಮಾಕರ್, ಡಾ. ಅರ್ಚನಾ ಮತ್ತು ಇತರ ಎಲ್ಲಾ ವೈದ್ಯರು ಸಹಕಾರ ನೀಡಿದರು. ಸುಮಾರು 54 ಜನ ಗುರುತಿನ ಚೀಟಿ ಪಡೆದರು.