
ಕೊಲ್ಲಮೊಗ್ರದ ಕಡಂಬಳ ಸೇತುವೆ ಕಾಮಗಾರಿ ಆರಂಭಿಸದೇ ಇದ್ದ ಕಾರಣದಿಂದಾಗಿ ಕೆಪಿಸಿಸಿ ಸದಸ್ಯ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದನ್ನೂ ಸಹಿಸದೇ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲಿನ ಭಯದಿಂದ ಅನಗತ್ಯ ಹೇಳಿಕೆ ನೀಡುತ್ತಿದೆ. ನೀವು ಟೀಕೆ ಮಾಡುವ ಬದಲು ಈ ಪ್ರಶ್ನೆಗಳಿಗೆ ಉತ್ತರಿಸಿ, 28 ವರ್ಷದಿಂದ ಸುಳ್ಯದ ಜನತೆಗೆ ಆಶ್ವಾಸನೆ ಕೊಟ್ಟು ಮೋಸ ಮಾಡಿದವರು ಯಾರು, ನಂದಕುಮಾರ್ ಭೇಟಿಯಿಂದ ನೀವು ಉರ್ಕೊಂಡಿದ್ದು ಯಾಕೆ, ಉಸ್ತುವಾರಿ ಸಚಿವರು ಹರಿಹರ ಪಲ್ಲತಡ್ಕ ಭೇಟಿ ವೇಳೆಗೆ ದಾರಿ ತಪ್ಪಿಸಿದ್ದು ಯಾರು, ಉಸ್ತುವಾರಿ ಸಚಿವರು ಬರುವಾಗ ಸ್ವ ಕ್ಷೇತ್ರದ ಶಾಸಕರು ನಾಪತ್ತೆಯಾಗಿದ್ದು ಯಾಕೆ, ಪ್ರವಾಹದಲ್ಲಿ ಹೆಚ್ಚು ಹಾನಿಗೊಳಗಾದ ಕೊಲ್ಲಮೊಗರು ಕಲ್ಮಕಾರು ಹರಿಹರಪಲ್ಲತಡ್ಕ ಬಾಳುಗೋಡು ಭಾಗಕ್ಕೆ ಎಷ್ಟು ಪರಿಹಾರ ಧನ ವಿನಿಯೋಗಿಸಿದ್ದಾರೆ, ಸಂಸದರು ನೀಡಿದ ಕಿಟ್ ಎಷ್ಟು ಜನ ಸಂತ್ರಸ್ತರುಗಳಿಗೇ ಸಿಕ್ಕಿದೆ, ಸಂಪೂರ್ಣ ಹಾನಿಗೊಳಗಾದ ಕುಟುಂಬಗಳಿಗೆ ಬಿಜೆಪಿಯ ವಯಕ್ತಿಕ ದೇಣಿಗೆ ಕೊಟ್ಟಿದೆಯೇ (ಸರ್ಕಾರ ಕೊಟ್ಟದ್ದು ಬಿಜೆಪಿಯದ್ದು ಆಗುವುದಿಲ್ಲ), ಉಪ್ಪುಕಳ ಸೇತುವೆ ಟೆಂಡರ್ ಪ್ರೋಸೆಸ್ಸಿಂಗ್ ಹಂತದಲ್ಲಿದೆ ಎಂದು ಬಂಡಲ್ ಬಿಡುವ ಮಂಡಲ ಅಧ್ಯಕ್ಷರು ಉಪ್ಪುಕಳ ಸೇತುವೆಗೆ ಮೀಸಲಿರಿಸಿದ ಅನುದಾನ/ಲೆಕ್ಕ ಶೀರ್ಷಿಕೆ ದಾಖಲೆ ಒದಗಿಸಬಹುದೇ, ಪ್ರವಾಹದ ಸಂದರ್ಭದಲ್ಲಿ ಈ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರೇ ಎಂದು ಸುಳ್ಯ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.