ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರದ ಜ್ಞಾನವಿಕಾಸ ಸಂಘದ ಸದಸ್ಯರಿಗೆ ಸೆ.25 ರಂದು ಕಾನೂರಾಯಣ ಚಲನಚಿತ್ರ ಪ್ರದರ್ಶನ ನಡೆಯಿತು.ಬಂಗ್ಲೆಗುಡ್ಡೆ ಶಾಲಾ ಶಿಕ್ಷಕರಾದ ಸುಭಾಷ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ರಾಜೇಶ್.ಕೆ, ಸುಳ್ಯ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಭಾರತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರ “ಎ” ಒಕ್ಕೂಟದ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ, ಕೊಲ್ಲಮೊಗ್ರ “ಬಿ” ಒಕ್ಕೂಟದ ಅಧ್ಯಕ್ಷರಾದ ಇಂದಿರಾ ಚಾಳೆಪ್ಪಾಡಿ, ಕಟ್ಟ ಒಕ್ಕೂಟದ ಅಧ್ಯಕ್ಷರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸದಸ್ಯರಾದ ಮಣಿಕಂಠ ಕಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸಂಯೋಜಕರು ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ಸತೀಶ್.ಟಿ.ಎನ್, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸದಸ್ಯರಾದ ಹರ್ಷ ಅಡ್ನೂರುಮಜಲು, ಜ್ಞಾನವಿಕಾಸದ ಸಂಯೋಜಕರಾದ ನೀಲಾವತಿ, ಸೇವಾಪ್ರತಿನಿಧಿಗಳಾದ ಸಾವಿತ್ರಿ, ಶೋಭಾ, ಪದ್ಮಾವತಿ ಹಾಗೂ ಜ್ಞಾನವಿಕಾಸದ ಸದಸ್ಯರುಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರ “ಎ” “ಬಿ” ಮತ್ತು ಕಟ್ಟ ಹಾಗೂ ಕಲ್ಮಕಾರು ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು.
ಕೊಲ್ಲಮೊಗ್ರ ಒಕ್ಕೂಟದ ಸೇವಾಪ್ರತಿನಿಧಿಗಳಾದ ಪದ್ಮಾವತಿ ಅವರು ಸ್ವಾಗತಿಸಿ ಕೊಲ್ಲಮೊಗ್ರ “ಬಿ” ಒಕ್ಕೂಟದ ಸದಸ್ಯರು ಹಾಗೂ ಜ್ಞಾನವಿಕಾಸದ ಸದಸ್ಯರಾದ ಸುಮತಿ ಅವರು ಧನ್ಯವಾದ ಸಮರ್ಪಿಸಿದರು. ಸುಳ್ಯ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಭಾರತಿ ಅವರು ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ