ಕಡಂಬಳ ಸೇತುವೆ ಕಾಮಗಾರಿಗೆ ಸಚಿವರಾದ ಎಸ್.ಅಂಗಾರ ಅವರ ಸೂಚನೆಯಂತೆ ಸುಳ್ಯ ಬಿ.ಜೆ.ಪಿ ಮಂಡಲಾಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರ ನಿರ್ದೇಶನದಂತೆ ಸೆ.22 ರಂದು ಪ್ರಾರಂಭಗೊಂಡಿದೆ. ಯಾವ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕೋ ಅಂತಹ ಸಮಯದಲ್ಲಿ ನಮ್ಮ ಸಚಿವರು ನಾಯಕರುಗಳು ಸ್ಪಂದಿಸಿದ್ದಾರೆ. ಭೀಕರ ಮಳೆಯಿಂದ ಕೊಚ್ಚಿ ಹೋದ ನಮ್ಮ ಗ್ರಾಮದ ನಾಲ್ಕು ಸೇತುವೆಗಳನ್ನು ಎಂಟು ದಿನಗಳಲ್ಲಿ ನಮ್ಮ ಸಚಿವರು, ನಾಯಕರು ಸ್ಪಂದಿಸಿ ಸರಿಪಡಿಸಿಕೊಟ್ಟಿದ್ದಾರೆ. ಇದನ್ನು ಕಾಂಗ್ರೆಸ್ ನವರಿಗೆ ನಾವು ಅರ್ಥಮಾಡಿಸಬೇಕಾಗಿಲ್ಲ. ಊರಿನ ಜನರಿಗೆ ನಮ್ಮ ಸಚಿವರ. ಹಾಗೂ ಬಿ.ಜೆ.ಪಿ ನಾಯಕರ ಸ್ಪಂದನೆ ಹೇಗೆ ಎಂದು ತಿಳಿದ ಕಾರಣ ಕಳೆದ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಎಂಟು ಸ್ಥಾನವು ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಮ್ಮ ಗ್ರಾಮದ ಜನರು ಕಾಂಗ್ರೆಸ್ ಮುಕ್ತ ಗ್ರಾಮವಾಗಿ ಮಾಡಿದ್ದಾರೆ. ನಮ್ಮ ಅಭಿವೃದ್ಧಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಬೇಕೆ ? ಮೊನ್ನೆ ಪ್ರವಾಹ ಬಂದ ನಂತರ ಆಗಮಿಸಿದ ರಾಜ್ಯ ಕಾಂಗ್ರೆಸ್ ನಾಯಕರು ಆಗಮಿಸಿ ಕಿಟ್ ಹಾಗೂ ಚೆಕ್ ವಿತರಿಸಿದ ಸಮಯದಲ್ಲಿ ರಾಜ್ಯ ನಾಯಕರುಗಳ ಹಾದಿ ತಪ್ಪಿಸಿ ಬಿ.ಜೆ.ಪಿ, ಕಾಂಗ್ರೆಸ್ ಎಂದು ತಾರತಮ್ಯ ಮಾಡಿ ಕಿಟ್ ಹಾಗೂ ಚೆಕ್ ಹಂಚಿ ಹೋದ ವಿಷಯ ನಮ್ಮ ಊರಿನ ಜನರಿಗೆ ತಿಳಿದಿದೆ. ನಮ್ಮ ಸಚಿವರಾಗಲಿ ಹರೀಶ್ ಕಂಜಿಪಿಲಿ ಅಗಲಿ ಗ್ರಾಮ ಪಂಚಾಯತು ಅಧ್ಯಕ್ಷರಾಗಲಿ ಅಂತಹ ತಾರತಮ್ಯವನ್ನು ಮಾಡದೇ ಅರ್ಹ ಪಲಾನುಭವಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ ಎಂದು ಕೊಲ್ಲಮೊಗ್ರ ಬಿ.ಜೆ.ಪಿಯ ಪ್ರಧಾನ ಕಾರ್ಯದರ್ಶಿ ಉದಯ ಶಿವಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024