Ad Widget

ಅಚ್ರಪ್ಪಾಡಿ ಶಾಲಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಮತ್ತು ಗ್ರಂಥಾಲಯದ ಮಾಹಿತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ, ಎಲಿಮಲೆ ಉಪಕೇಂದ್ರ ವತಿಯಿಂದ ಸೆ.22 ರಂದು ಅಚ್ರಪ್ಪಾಡಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ಯೋಗ ತರಬೇತುದಾರರು ಶ್ರೀಯುತ ಕೃಷ್ಣಪ್ರಸನ್ನ ನೀಡಿದರು. ಹಾಗೂ ದೇವಚಳ್ಳ ಗ್ರಂಥಾಲಯಕ್ಕೆ ನೂತನವಾಗಿ ನೇಮಕಗೊಂಡಿರುವ ಗ್ರಂಥಪಾಲಕಿ ಶ್ರೀಮತಿ ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿ ಅವರು ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಲಭ್ಯವಿರುವ ಮಕ್ಕಳ ಕಥೆ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿದರು. ಅದಲ್ಲದೆ ಆದಿತ್ಯವಾರ ವಿಶೇಷವಾಗಿ ಮಕ್ಕಳಿಗೋಸ್ಕರ ಚದುರಂಗ ಹಾಗೂ ಇನ್ನಿತರ ಒಳಾಂಗಣ ಆಟದ ಬಗ್ಗೆ ತರಬೇತಿಯನ್ನು ನೀಡುವುದಾಗಿ ತಿಳಿಸಿದರು.

. . . . . . . . .

ಹಾಗೆ ಅಚ್ರಪ್ಪಾಡಿ ಶಾಲೆಯಲ್ಲಿ ನಿರಂತರವಾಗಿ ಆರೋಗ್ಯ ಮತ್ತು ಸಮುದಾಯ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಪೂರಕವಾಗಿ ಸಹಕರಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಯ ಕುಮಾರಿ ಮೋನಿಷಾ ಜಿ ಎಸ್ ಹಾಗೂ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶ್ರೀ. ಬಾಬು ಗೌಡ ಅಚ್ರಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

. . . . . . .

ಶಾಲಾ ಮತ್ತು ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading