Ad Widget

ಸುಳ್ಯ ರೋಟರಿ ಕ್ಲಬ್ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಕಾರ್ಯಕ್ರಮ

ಸುಳ್ಯ ರೋಟರಿ ಕ್ಲಬ್ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಕಲಿಕಾ ಆಸರೆ ಕಿಟ್ ವಿತರಣೆ,ವೃತ್ತಿ ಮಾರ್ಗದರ್ಶನ ತರಬೇತಿ ಉದ್ಘಾಟನೆ ಹಾಗೂ ಶಾಲಾ ಕೃತಿ ಸಂಪುಟಕ್ಕೆ ಫೈಲ್ ವಿತರಣೆ ರೋಟರಿ ಸಭಾಭವನದಲ್ಲಿ ನಡೆಯಿತು.

. . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೋ.ಚಂದ್ರಶೇಖರ ಪೇರಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ರಾಜ್ಯಪಾಲ ರೋ.ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಾಮಾಜಿಕ ಸಂಸ್ಥೆಗಳ ಕೊಡುಗೆ ಹೆಚ್ಚಿದೆ. ರೋಟರಿ ಸಂಸ್ಥೆಯಿಂದ ಶಿಕ್ಷಣ ಕ್ಷೇತ್ರಕ್ಕೆಅಮೂಲ್ಯವಾದ ಕೊಡುಗೆಯನ್ನು ಕಾಣುತ್ತಿದ್ದೇವೆ.ಜಲಸಿರಿ,ವನಸಿರಿ ಆರೋಗ್ಯ ಸಿರಿ ಎಂಬ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಚಂದ್ರಶೇಖರ ಪೇರಾಲುರವರ ನೇತೃತ್ವದಲ್ಲಿ ನಡೆಯುವ ಸಾಮಾಜಿಕ ಕಾರ್ಯಕ್ರಮಗಳು ಇತರ ಕ್ಲಬ್ ಗಳಿಗೆ ಮಾದರಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್. ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದಾನಿಗಳ ನೆರವಿನಿಂದ 50 ಮಂದಿ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್, ಅಡಂಗಾಯ ಹಿ.ಪ್ರಾ.ಶಾಲೆಗೆ ಫೈಲ್ ವಿತರಣೆ, ಅಸ್ಕಾರ್ ವನಸುಮ ಹಾಸ್ಟೆಲ್ ಗೆ ಪೈಬರ್ ಚಯರ್, ಟಿ.ಬಿ.ರೋಗಿಗಳಿಗೆ ಫುಡ್ ಕಿಟ್ ವಿತರಣೆಯನ್ನು ಹಮ್ಮಿಕೊಳ್ಳಲಾಯಿತು.

ವೇದಿಕೆಯಲ್ಲಿ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೋ.ಶಿವರಾಮ ಏನೆಕಲ್ಲು, ಝೂನಲ್ ಲೆಫ್ಟಿನೆಂಟ್ ರೋ.ಪ್ರೀತಮ್ ಡಿ.ಕೆ., ಜಿಲ್ಲಾ ಕಾರ್ಯದರ್ಶಿ ರೋ.ನಾರಾಯಣ ಹೆಗ್ಡೆ, ರೋಟರಿ ನಿಕಟಪೂರ್ವಾಧ್ಯಕ್ಷ ರೋ.ಪ್ರಭಾಕರ ನಾಯರ್, ರೋ.ಸಿಎ ಗಣೇಶ್ ಭಟ್, ರೋ.ಮೀನಾಕ್ಷಿ ಗೌಡ, ನಿಯೋಜಿತ ಅಧ್ಯಕ್ಷ ರೋ.ಆನಂದ ಖಂಡಿಗ, ಕಾರ್ಯದರ್ಶಿ ರೋ.ಮಧುರಾ ಎಂ.ಆರ್. ಉಪಸ್ಥಿತರಿದ್ದರು.

ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಗಣೇಶ್ ಭಟ್ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯದರ್ಶಿ ಮಧುರಾ ಎಂ.ಆರ್.ವಂದಿಸಿ, ರಮಾ ವೈ .ಕೆ. ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!