ಭೀಕರ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೊಗಿದ್ದ ಕಡಂಬಳ ಸಂಪರ್ಕ ಸೇತುವೆಯನ್ನು ಸಚಿವರಾದ ಎಸ್. ಅಂಗಾರ ಅವರ ಶಿಪರಾಸ್ಸಿನ ಮೇರೆಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನಿರ್ದೇಶನದಂತೆ ಇಂದು ದುರಸ್ತಿ ಕಾರ್ಯ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪಲಾನುಭವಿಗಳು ಉಪಸ್ಥಿತರಿದ್ದರು. ಪ್ರವಾಹದಿಂದ ಕೊಚ್ಚಿ ಹೊಗಿದ್ದ ಸುಮಾರು 5 ಸೇತುವೆಗಳ ಪೈಕಿ ಕಡಂಬಳ ಸೇತುವೆಯ ಮಾತ್ರ ಬಾಕಿ ಉಳಿದಿತ್ತು. ವಿಳಂಬವಾಗುತ್ತಿರುವ ಬಗ್ಗೆ ಸಚಿವರಿಗೆ ದೂರು ಹೋದ ಹಿನ್ನೆಲೆಯಲ್ಲಿ ಕೂಡಲೇ ಸಿಮೆಂಟ್ ಪೈಪ್ ಹಾಕಿ ವಾಹನ ಸಂಚಾರಕ್ಕೆ ರಸ್ತೆ ನಿರ್ಮಿಸಲು ಸಚಿವರು ಸೂಚನೆ ನೀಡಿದ್ದರು.
- Thursday
- November 21st, 2024