ಸುಳ್ಯ ತಾಲೂಕು ಜನತಾದಳ ಪಕ್ಷದ ಗ್ರಾಮ ಪ್ರಮುಖರ ಹಾಗೂ ವಿವಿಧ ಘಟಕ ಅಧ್ಯಕ್ಷರ ಸಭೆಯು ಸೆ.19 ರಂದು ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ ಅವರ ಅಧ್ಯಕ್ಷತೆಯಲ್ಲಿ ಸುಳ್ಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಪಕ್ಷ ಸಂಘಟನೆ, ಗ್ರಾಮ ಸಮಿತಿಗಳ ರಚನೆ ಹಾಗೂ ಪಕ್ಷದ ನೂತನ ಕಛೇರಿ ಉದ್ಘಾಟನೆ ಹಾಗೂ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಪಕ್ಷದ ರಾಜ್ಯ ವಕ್ತಾರ ಎಂ.ಬಿ ಸದಾಶಿವ ಹಾಗೂ ಜನತಾದಳದ ಅಧ್ಯಕ್ಷರಾದ ಜಾಕೆ ಮಾಧವ ಗೌಡರು ಮಾತನಾಡಿದರು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಜನತಾದಳ ಕಾರ್ಯಾಧ್ಯಕ್ಷರಾದ ಜ್ಯೋತಿ ಪ್ರೇಮಾನಂದ, ಜಿಲ್ಲಾ ಯುವ ಜನತಾದಳ ಕಾರ್ಯದರ್ಶಿ ಪ್ರವೀಣ್ ಮುಂಡೋಡಿ, ಮಾಜಿ ಎ.ಪಿ.ಎಂ.ಸಿ ಉಪಾಧ್ಯಕ್ಷರಾದ ಪಿ.ಎ ಉಮ್ಮರ್, ಪ.ಜಾತಿ ಹಾಗೂ ಪಂಗಡದ ಮಾಜಿ ಅಧ್ಯಕ್ಷರಾದ ಎಂ.ಬಿ ಚೋಮ, ತಾಲೂಕು ಮಹಿಳಾ ಜನತಾದಳದ ಅಧ್ಯಕ್ಷರಾದ ಮಹಾಲಕ್ಷ್ಮಿ ಕೊರಂಬಡ್ಕ, ಪಕ್ಷದ ಗ್ರಾಮಗಳ ಮುಖ್ಯಸ್ಥರಾದ ದಾಮೋದರ ನಾರ್ಕೋಡು, ದೇವರಾಮ ಬಾಳಕಜೆ, ಎ.ಬಿ ಮೊಯಿದಿನ್, ಲೋಲಾಕ್ಷ ಕಾರಿಂಜ, ಮಹಮ್ಮದ್ ಕನಕಮಜಲು, ಸುರೇಶ್ ಕುಮಾರ್ ನಡ್ಕ, ಹನೀಫ್ ಮೊಟ್ಟೆಂಗಾರ್, ರೋಹನ್ ಪೀಟರ್, ರಾಮಚಂದ್ರ ಉಬರಡ್ಕ ಹಾಗೂ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ ಮೋಹನ್ ಚಾಂತಾಳ ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿ, ವಂದಿಸಿದರು.