Ad Widget

ಹರಿಹರ ಪಲ್ಲತ್ತಡ್ಕ :- ಸೆ.27 ರಂದು ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

ದ.ಕ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಸೆ.27 ರಂದು ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಲಿದೆ.

. . . . . . . . .

ಪೂರ್ವಾಹ್ನ 10:30 ರಿಂದ 11:00 ರವರೆಗೆ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವಠಾರದಲ್ಲಿ, ಪೂರ್ವಾಹ್ನ 11:15 ರಿಂದ 11:30 ರವರೆಗೆ ಹರಿಹರ ಶ್ರೀ ರಾಮ ಕುಟ್ಟಿಯವರ ಮನೆಯ ಬಳಿ, ಪೂರ್ವಾಹ್ನ 11:40 ರಿಂದ 12:00 ರವರೆಗೆ ರೇಗನ್ ಶೆಟ್ಟಿಯಡ್ಕ ಅವರ ಮನೆ ಬಳಿ, ಅಪರಾಹ್ನ 12:10 ರಿಂದ 12:30 ರವರೆಗೆ ಕಲ್ಲೇಮಠ ಸಾರ್ವಜನಿಕ ಗ್ರಂಥಾಲಯದ ಬಳಿ, ಅಪರಾಹ್ನ 12:40 ರಿಂದ 1:00 ರವರೆಗೆ ಬಸವನಗುಡಿ ವಠಾರ ಬಾಳುಗೋಡು, ಅಪರಾಹ್ನ 1:10 ರಿಂದ 1:35 ರವರೆಗೆ ಬೆಟ್ಟುಮಕ್ಕಿ ಮೈದಾನದ ಬಳಿ ಬಾಳುಗೋಡು ಹಾಗೂ ಅಪರಾಹ್ನ 1:50 ರಿಂದ 2:00 ರವರೆಗೆ ಮಲ್ಲಾರ ಬಸ್ ಪ್ರಯಾಣಿಕರ ತಂಗುದಾಣದ ಬಳಿ ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಲಿದ್ದು, ನಾಯಿಗಳನ್ನು ಲಸಿಕೆಗಾಗಿ ಕರೆತರುವವರು ನಾಯಿಯ ಮಾಲೀಕರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ತರತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಮೇಲ್ಕಾಣಿಸಿದ ಸ್ಥಳದಲ್ಲಿ ಲಸಿಕೆ ಹಾಕಿಸಿಕೊಳ್ಳಲಾಗದಿದ್ದಲ್ಲಿ ಅಪರಾಹ್ನ 2:15 ಕ್ಕೆ ಗ್ರಾಮ ಪಂಚಾಯತ್ ಕಛೇರಿ ಬಳಿ ಹಾಜರಿರುವುದು ಎಂದು ತಿಳಿಸಲಾಗಿದೆ.

. . . . . . .

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading