ಸೇವಾಜೆ ಸ.ಕಿ.ಪ್ರಾ.ಶಾಲೆಯಲ್ಲಿ ಸೆ.19ರಂದು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದಂತಹ ತರಕಾರಿ ಹಣ್ಣುಗಳನ್ನು ಇರಿಸಿ ಅವುಗಳಲ್ಲಿ ಕಾರ್ಬೋಹೈಡ್ರೆಟ್, ವಿಟಮಿನ್, ಪ್ರೋಟಿನ್, ಲಿಪಿಡ್, ಖನಿಜ, ನಾರು ಮತ್ತು ನೀರಿನ ಅಂಶವನ್ನು ಹೊಂದಿರುವ ಪದಾರ್ಥಗಳನ್ನಾಗಿ ವಿಂಗಡಿಸಿ ಮಕ್ಕಳಿಗೆ ಪೌಷ್ಟಿಕ ಹಾಗೂ ಸಮತೋಲನ ಆಹಾರಗಳ ಬಗ್ಗೆ ವಿವರಿಸಲಾಯಿತು.
ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಎನ್., ಗೌರವ ಶಿಕ್ಷಕಿ ಕು.ದುರ್ಗಾಶ್ರೀ, ಅಥಿತಿ ಶಿಕ್ಷಕಿ ಕು.ಅಶ್ವಿನಿ ಎಂ, ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.