ಸುಳ್ಯ ತಾಲೂಕು ಪಯಸ್ವಿನಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.19 ರಂದು ಸುಳ್ಯದ ಸ್ತ್ರೀ ಶಕ್ತಿ ಸಭಾ ಭವನದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತ ಎಸ್. ವಾರ್ಷಿಕ ವರದಿ ಮಂಡಿಸಿದರು.
ಸಂಘದ ಪದನಿಮಿತ್ತ ನಿರ್ದೇಶಕಿ ಸಿಡಿಪಿಒ ಶ್ರೀಮತಿ ರಶ್ಮಿಯವರು ಸಂಘದ ಬೆಳವಣಿಗೆ ಬಗ್ಗೆ ಮಾತನಾಡಿ ಸಂಘದ ಸದಸ್ಯರು ನಮ್ಮ ಸಂಘದಿಂದಲೇ ಸಾಲ ಪಡೆದು ಸಂಘವನ್ನು ಅಭಿವೃದ್ಧಿಯತ್ತ ಕೊಂಡೋಗಬೇಕು. ಹಾಗೂ ಗ್ರೂಪ್ ಸಾಲ ಕೂಡ ನೀಡಲಾಗುವುದು. ಇಲ್ಲಿ ಸಾಲ ಮಾಡಿದವರು ಅವಧಿಗೆ ಸರಿಯಾಗಿ ಮರುಪಾವತಿ ಮಾಡಿ ಸಹಕರಿಸಬೇಕು ಎಂದು ಹೇಳಿದರು.ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಸಹಕಾರ ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.
ಕಾನೂನು ಸಲಹೆಗಾರರಾದ ನ್ಯಾಯವಾದಿ ದಿನೇಶ್ ಅಂಬೆಕಲ್ಲು ಸಂಘದ ವ್ಯವಹಾರದ ಬಗ್ಗೆ ಕಾನೂನು ಸಲಹೆ ನೀಡಿದರು. ಸಂಘದ ಆರ್ಥಿಕ ಸಲಹೆಗಾರರಾದ ಪಿ.ಸಿ.ಜಯರಾಮರವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲತಾ ಕುಮಾರಿ, ನಿರ್ದೇಶಕರಾದ ವನಜಾ ಎಸ್.ರೈ, ಶ್ರೀಮತಿ ನಿರ್ಮಲ ಎಂ, ಶ್ರೀಮತಿ ನಳಿನಿ ಜಿ, ಶ್ರೀಮತಿ ಸರಸ್ವತಿ ಸಿ.ಕೆ, ಶ್ರೀಮತಿ ಪಾರ್ವತಿ ಐವರ್ನಾಡು, ಶ್ರೀಮತಿ ಸಂಧ್ಯಾ ಟಿ.ಕೆ, ಶ್ರೀಮತಿ ಪ್ರೇಮಾ ಕನಕಮಜಲು, ಶ್ರೀಮತಿ ರೇವತಿ ಪಿ., ಶ್ರೀಮತಿ ಹರ್ಷಿಣಿ ಕುಮಾರಿ, ಸುಲೋಚನಾ ದೇವ, ಶ್ರೀಮತಿ ಪವಿತ ಡಿ.ಸಿ, ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಶ್ರೀಮತಿ ಲತಾ ಕುಮಾರಿ ವಂದಿಸಿದರು.