Ad Widget

ಚೊಕ್ಕಾಡಿ: ಧರ್ಮಸ್ಥಳ ಯೋಜನೆಯ ದೊಡ್ಡತೋಟ ವಲಯದ ಒಕ್ಕೂಟಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ದೊಡ್ಡತೋಟ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆ.19 ರಂದು ಚೊಕ್ಕಾಡಿ ರಾಮ ದೇವಾಲಯದ ದೇಸಿ ಭವನ ಸಭಾಭವನದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಚೊಕ್ಕಾಡಿ ರಾಮ ದೇವಾಲಯದ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಪಡ್ನೂರು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಸಾದ ಶೇಣಿ ವಹಿಸಿದ್ದರು.

. . . . . . .

ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸದಸ್ಯ ಪಿ.ಜಿ.ಎಸ್.ಎನ್.ಪ್ರಸಾದ್, ಅಮರಮುಡ್ನೂರು ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪ್ರಗತಿಪರ ಕೃಷಿಕರಾದ ಆನೆಕಾರ ಗಣಪಯ್ಯ ಭಟ್, 1568 ನೇ ಮದ್ಯವರ್ಜನ ಶಿಬಿರದ ವ್ಯ.ಸ. ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಗೌರವಾಧ್ಯಕ್ಷ ಎಂ.ಜಿ.ಸತ್ಯನಾರಾಯಣ ಮಾಯಿಪಡ್ಕ, ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ, ದೊಡ್ಡತೋಟ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರಾಜಾರಾಮ ಭಟ್ ಬೆಟ್ಟ,ಅಮರಪಡ್ನೂರು ಸಂಘದ ಅಧ್ಯಕ್ಷೆ ವೀಣಾ, ಪೈಲಾರು ಅಧ್ಯಕ್ಷೆ ಚಂದ್ರಕಲಾ,ಕುಕ್ಕುಜಡ್ಕ ಅಧ್ಯಕ್ಷ ಹರಿಶ್ಚಂದ್ರ ಕಟ್ಟದಮಜಲು, ಕಳಂಜ ಅಧ್ಯಕ್ಷ ನಾರಾಯಣ, ಕೋಟೆ ಮುಂಡುಗಾರು ಅಧ್ಯಕ್ಷ ರಘುನಾಥ ಕೆದಿಲ, ಪ್ರಗತಿ ಬಂಧು ಸ್ವ ಸಹಾಯ ಸಂಘದ ವಲಯಾಧ್ಯಕ್ಷ ಭಾಸ್ಕರ ರಾವ್ ಚೆನ್ನಡ್ಕ, ಸದಸ್ಯ ಮೋಹನ ಮರ್ಕಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೊಡ್ಡತೋಟ ವಲಯದ ಅಮರಪಡ್ನೂರು, ಕುಕ್ಕುಜಡ್ಕ, , ಕಳಂಜ, ಪೈಲಾರು, ಕೋಟೆ ಮುಂಡುಗಾರು ಸ್ವ-ಸಹಾಯ ಸಂಘಗಳ ನೂತನ ಪದಾಧಿಕಾರಿಗಳಿಗೆ ಯೋಜನಾಧಿಕಾರಿಯವರು ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಕುಟುಂಬಗಳಿಗೆ ಯೋಜನೆಯ ವತಿಯಿಂದ ಪರಿಹಾರ ಧನ ಸಹಾಯ ನೀಡಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಯಿತು. ಪೈಲಾರಿನಲ್ಲಿ ರಚನೆಗೊಂಡ ನೂತನ ಶ್ರೀ ರಾಮ ಭಜನಾ ಮಂಡಳಿಗೆ ಕಡತವನ್ನು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಮತ್ತು ಯೋಜನಾಧಿಕಾರಿ ನಾಗೇಶ್ ರವರು ಹಸ್ತಾಂತರಿಸಿ ಶುಭ ಹಾರೈಸಿದರು. ಬೆಳಗ್ಗೆ ಶ್ರೀ ರಾಮ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಂಘದ ಸದಸ್ಯೆ ಪೂರ್ಣಿಮಾಪ್ರಾರ್ಥಿಸಿ, ವಲಯ ಮೇಲ್ವಿಚಾರಕ ಸೀತಾರಾಮ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಹರ್ಷಿತಾ ವಂದಿಸಿ, ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading