
ಸುಳ್ಯದ ಖ್ಯಾತ ಲೇಖಕಿ, ವಿಮರ್ಶಕಿ, ಸಂಪನ್ಮೂಲವ್ಯಕ್ತಿ , ಇತ್ತೀಚೆಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪಡೆದ ಡಾ. ಅನುರಾಧಾ ಕುರುಂಜಿ ಅವರಿಗೆ ಸೆ.19ರಂದು ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಕುರುಂಜಿ ಕುಟುಂಬದ ಯಜಮಾನ ಬಾಲಣ್ಣ ಗೌಡ,ಗುರುಸ್ವಾಮಿಗಳು, ಅಯ್ಯಪ್ಪ ಸೇವಾ ಮಂದಿರದ ಧರ್ಮದರ್ಶಿ ಶಿವಪ್ರಕಾಶ್ ಅಡ್ಪಂಗಾಯ, ನ.ಪಂ.ಸದಸ್ಯೆ ಶೀಲಾವತಿ ಕುರುಂಜಿ ಹಾಗೂ ಅಯ್ಯಪ್ಪ ವೃತಧಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.