- Thursday
- November 21st, 2024
ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಒಡಿಯೂರು ಗ್ರಾಮವಿಕಾಸ ಯೋಜನೆಯ ಬೆಳ್ಳಾರೆ ಘಟ ಸಮಿತಿಯಿಂದ ಸೆ.18 ರಂದು ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಬೆಳ್ಳಾರೆ ಘಟಸಮಿತಿಯ ಅಧ್ಯಕ್ಷರು, ಸಂಘದ ಸದಸ್ಯರು ಮತ್ತು ದೇವಸ್ಥಾನದ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಮುರುಳ್ಯ- ಎಣ್ಮೂರು ಪ್ರಾ.ಕೃ.ಪ.ಸ.ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯ ಬಗ್ಗೆ ಪೂರ್ವಭಾವಿ ಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷರಾದ ವಸಂತ ಹೆಚ್.ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮಾವತಿ ರೈ ಎಣ್ಮೂರುಗುತ್ತು, ನಿರ್ದೇಶಕರುಗಳಾದ ರಘುನಾಥ ರೈ ಕೆ.ಎನ್.ವಸಂತ ನಡುಬೈಲ್, ರೂಪರಾಜ ರೈ, ರಾಜಶೇಖರ ಶೃಂಗೇರಿ, ದಿನೇಶ್ ಹೆಚ್.,ಪುರುಷೋತ್ತಮ ಆಚಾರ್ಯ,ದಿನೇಶ್ ಎ.ಶೇಖರ ಸಾಲಿಯಾನ್,ನಳಿನಿ ಸೀತಾರಾಮ ರೈ ಯು...
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ,ಸುಳ್ಯ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 51 ನೇ ವರ್ಷದ ದಸರಾ ಉತ್ಸವ 2022 ರ ಅಂಗವಾಗಿ ಅ.10 ರಂದು ನಡೆಯಲಿರುವ ವೈಭವದ ಶಾರದಾ ದೇವಿಯ ಶೋಭಾಯಾತ್ರೆಯ ಮೆರುಗು ಹೆಚ್ಚಿಸುವ ಸಲುವಾಗಿ ಡಿ.ಜೆ.ಫ್ರೆಂಡ್ಸ್ ಕ್ಲಬ್ ಸುಳ್ಯ ಇವರ 4 ನೇ ವರ್ಷದ ಹುಲಿ ವೇಷಗಳ ಸ್ಥಬ್ಧ...
ಕಲ್ಮಡ್ಕ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಸಪ್ತಶ್ರೀ ಗೊಂಚಲು ಸಮಿತಿ ಕಲ್ಮಡ್ಕ, ಗ್ರಾಮ ಪಂಚಾಯತ್ ಕಲ್ಮಡ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಮಾತೃವಂದನ ಸಪ್ತಾಹ, ಹೆಣ್ಣು ಶಿಶು ಪ್ರದರ್ಶನ ಪಡ್ಪಿನಂಗಡಿ ಶಿವ ಗೌರಿ ಕಲಾಮಂದಿರದಲ್ಲಿ ಜರುಗಿಸಲಾಯಿತ್ತು....
ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸಂಪಾಜೆ ಇದರ 2021-22 ರ ಸಾಲಿನ ವಾರ್ಷಿಕ ಮಹಾಸಭೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಸಂಘದ ಅದ್ಯಕ್ಷರಾದ ಶ್ರೀ. ಯನ್.ಸಿ.ಅನಂತ್ ಊರುಬೈಲು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಳೆದ ಅವಧಿಯಲ್ಲಿ ಸಂಸ್ಥೆ 202 ಕೋಟಿಗೂ ಮಿಗಿಲಾಗಿ ವ್ಯವಹಾರ ಮಾಡಿ ರೂ 31 ಲಕ್ಷಕ್ಕೂ ಮಿಗಿಲಾಗಿ ಲಾಭ ಗಳಿಸಿದ್ದು,ಸದಸ್ಯರಿಗೆ 8.50%...
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಸೆ.17 ರಂದು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಅನಿತಾಲಕ್ಷ್ಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ...
22.76 ಲಕ್ಷ ಲಾಭಾಂಶ 07% ಡಿವಿಡೆಂಡ್ ಘೋಷಣೆ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.18 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನ ಸುಬ್ರಹ್ಮಣ್ಯ ಇಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 2021-22ನೇ ಸಾಲಿನಲ್ಲಿ ಸಂಘವು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕದಲ್ಲಿ ಸೆ.14 ರಂದು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ಕಲ್ಲುಗುಂಡಿಯ ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿ ಇದರ 12 ನೇ ವಾರ್ಷಿಕ ಮಹಾಸಭೆಯು ಕಛೇರಿ ಮುಂಭಾಗದ ಸಭಾಂಗಣದಲ್ಲಿ ಸೆ.18 ರಂದು ನಡೆಯಿತು. 2021-22ರ ಬ್ಯಾಂಕ್ ನಡೆಸಿದ ಒಟ್ಟು ವ್ಯವಹಾರದ ಲೆಕ್ಕಪತ್ರ ವನ್ನು ಕಾಯ೯ದಶಿ೯ ಶಿವಪೆರುಮಳ್ ಸಭೆಯಲ್ಲಿ ಮಂಡಿಸಿದರು. ಸೊಸೈಟಿ ರೂ.40.00ಲಕ್ಷ ವ್ಯವಹಾರ ನಡೆಸಿ ಲಾಭ ಗಳಿಸಿದ ಅಂಕಿ ಅಂಶ ಗಳನ್ನು ಸಭೆಗೆ ತಿಳಿಸಿದರು. ಮಹಾಸಭೆಯಲ್ಲಿ ಬ್ಯಾಂಕ್...