- Thursday
- November 21st, 2024
ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರಿನ ವಳಲಂಬೆಯ ಸಮೀಕ್ಷಾ ಮೋಟ್ನೂರು ಅವರ ಚಿಕಿತ್ಸೆಗೆ ದೇವ ಗೆಳೆಯರ ಬಳಗದ ವತಿಯಿಂದ ಧನಸಹಾಯ ನೀಡಲಾಯಿತು. ಗೆಳೆಯರ ಬಳಗ ಹಾಗೂ ಊರವರಿಂದ ಸಂಗ್ರಹಿಸಿದ 13,650 ರೂ. ಗಳನ್ನು ಸೆ. 19 ರಂದು ಮನೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೆ. 17ರಂದು ಆದರ್ಶ ಅಂಗನವಾಡಿ ಅಭಿಯಾನದಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಮುರುಳ್ಯ ಗ್ರಾಮದ ಶಾಂತಿನಗರ ಅಂಗನವಾಡಿಯನ್ನು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ವತಿಯಿಂದ ದತ್ತು ತೆಗೆದುಕೊಳ್ಳಲಾಯಿತು. ಅಂಗನವಾಡಿಯಲ್ಲಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ನಂತರ ಪ್ರಧಾನಮಂತ್ರಿಯವರ ಹುಟ್ಟು ಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳು...
ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯದ ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ಮಕ್ಕಳ ವಿಭಾಗದಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರವನ್ನು ದಿನಾಂಕ 26.09.2022 ರಿಂದ 30.09.2022 ರ ವರೆಗೆ ಸುಳ್ಯದ ಅಂಬಟೆ ಅಡ್ಕದಲ್ಲಿರುವ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಆಸ್ಪತ್ರೆಯ ಪ್ರಸೂತಿ ಮತ್ತು...
ಗುತ್ತಿಗಾರು ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದ ಅಂಗಡಿ ಕಟ್ಟಡದ ಮುಂಭಾಗದಲ್ಲಿ ಶ್ರಮದಾನದ ಮೂಲಕ ರಿಕ್ಷಾ ಚಾಲಕರು ಸ್ವಚ್ಛತಾ ಕಾರ್ಯ ಕೈಗೊಂಡರು. ರಿಕ್ಷಾ ಚಾಲಕರ ಮಾದರಿ ಕಾರ್ಯಕ್ಕೆ ವರ್ತಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಲೀಸ್ ಇಲಾಖೆಯ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ( Scene Of Crime Officer) ಹುದ್ದೆಗೆ ಮನಸ್ವಿನಿ ಎನ್.ಕೆ. ಬಡ್ಡಡ್ಕ ಆಯ್ಕೆಯಾಗಿದ್ದು ಸೆ.19 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರೋಟರಿಯಲ್ಲಿ ಪ್ರಾಥಮಿಕ, ಉಜಿರೆಯ ಎಸ್.ಡಿ.ಎಂ.ಸಿ.ಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಬಿಎಸ್ಸಿ ಪದವಿ ಹಾಗೂ ಗುಜರಾತ್ ನ ಫೋರೆನ್ಸಿಕ್ ಯೂನಿವರ್ಸಿಟಿಯಲ್ಲಿ...
ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ ಮತ್ತು ಸಂಟ್ ಮೇರಿಸ್ ಚರ್ಚ್ ಗುತಿಗಾರು ಸಂಯುಕ್ತವಾಗಿ ಗುತಿಗಾರು ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ. 75 ನೇ ಸ್ವಾತಂತ್ರ್ಯತ್ಸವ ಪ್ರಯುಕ್ತ “ಪ್ರಜಾಪ್ರಭುತ್ವ ದೇಶ, ನನ್ನ ಭಾರತ ” ಎಂಬ ವಿಷಯದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಸೆ.18 ರಂದು ಗುತಿಗಾರು ಚರ್ಚಿನ ಸಭಾ ಭವನದಲ್ಲಿ...
ಸುಳ್ಯದ ಬಿ. ಜೆ. ಪಿ. ಮುಂದಾಳು, ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎ. ವಿ. ತೀರ್ಥರಾಮರನ್ನು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರವು ನೇಮಕ ಮಾಡಿದ್ದು, ಇಂದು ಮಂಗಳೂರಿನ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ.ಮುಖಂಡರುಗಳಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಸುಭೋದ್ ಶೆಟ್ಟಿ ಮೇನಾಲ,ರಾಕೇಶ್...
ಉಪ್ಪಿನಂಗಡಿಯ ರಾಮನಗರ ಗಾಣಿಗ ಸಮುದಾಯ ಭವನದಲ್ಲಿ ಆರ್ ಪಿ ಕ್ರಿಯೇಷನ್ಸ್ ಪಾಂಬಾರು ಆಯೋಜಿಸಿದ್ದ ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸುಳ್ಯದ ತನ್ಮಯ್ ಎಮ್ ಸೋಮಯಾಗಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ . ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರಿನ ಶಾಸಕರಾದ ಶ್ರೀ ಸಂಜೀವ್ ಮತಂದೂರು ರವರು ವಹಿಸಿದ್ದರು . ಸುಳ್ಯದ ಖ್ಯಾತ ಸಾಹಿತಿ , ಗಾಯಕ ಮತ್ತು...
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾಗಿ ಸುಳ್ಯದಿಂದ ಭರತ್ ಮುಂಡೋಡಿ ಮತ್ತು ಮಡಿಕೇರಿಯಿಂದ ನಂದಕುಮಾರ್ ನೇಮಕಗೊಂಡಿರುತ್ತಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭರತ್ ಮುಂಡೋಡಿಯವರು ಕಳೆದ ಅವಧಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಕೆಪಿಸಿಸಿ ಸದಸ್ಯರಾಗಿ ನೇಮಕಗೊಂಡಿರುವ ಎಚ್.ಎಂ.ನಂದಕುಮಾರ್ ಮಡಿಕೇರಿ ಪುರಸಭಾ ಮಾಜಿ ಸದಸ್ಯರಾಗಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್...
ಜಾಲ್ಲೂರು ಗ್ರಾಮದ ಅಡ್ಕಾರಿನ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಅಯ್ಯಪ್ಪ ಮಂದಿರದಲ್ಲಿ ಡಿಸೆಂಬರ್ ತಿಂಗಳಲ್ಲಿ ಜರುಗುವ ವಾರ್ಷಿಕೋತ್ಸವದ ಕುರಿತು ಪೂರ್ವಭಾವಿ ಸಭೆ ಹಾಗೂ ನೂತನ ಉತ್ಸವ ಸಮಿತಿಯನ್ನು ಸೆ.18ರಂದು ರಚಿಸಲಾಯಿತು. ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಅಡ್ಡಾರು ಅದ್ಯಕ್ಷತೆ ವಹಿಸಿದ್ದರು. ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ನಾರಾಯಣ ಮಡಿವಾಳ ಅವರ ಉಪಸ್ಥಿತರಿದ್ದರು. ಈ...
Loading posts...
All posts loaded
No more posts