ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ಸೆ.17 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ವಹಿಸಿ ಸಂಘದ ಖರ್ಚು ವೆಚ್ಚದ ಮಾಹಿತಿಯನ್ನು ತಿಳಿಸಿದರು.
ಈ ಬಾರಿ ಸಂಘವು 14,875 ಸದಸ್ಯರಿಂದ 3.63ಕೋಟಿ ಪಾಲು ಬಂಡವಾಳ ಹಾಗೂ 127.34 ಕೋಟಿ ಠೇವಣಿ ಸಂಗ್ರಹಿಸಿದೆ ಸದಸ್ಯರುಗಳಿಗೆ 107.26 ಕೋಟಿ ವಿವಿಧ ಸಾಲುಗಳನ್ನು ವಿತರಿಸಲಾಗಿದೆ. ವಿವಿಧ ಬ್ಯಾಂಕ್ ಗಳಲ್ಲಿ 16.74 ಕೋಟಿ ರೂಪಾಯಿ ಗಳನ್ನು ವಿವಿಧ ಬ್ಯಾಂಕ್ ಗಳಲ್ಲಿ ವಿನಿಯೋಗ ಮಾಡಲಾಗಿದೆ . ಪ್ರಸಕ್ತ ವರ್ಷ ಒಟ್ಟು 656.74 ಕೋಟಿ ವಾರ್ಷಿಕ ವ್ಯವಹಾರ ನಡೆಸಿ .1.20 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇಕಡಾ 15 ರಷ್ಟು ಡಿವಿಡೆಂಡ್ ವಿತರಿಸಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಸಂಘದ ಬೆಳ್ಳಿ ಹಬ್ಬದ ವೇಳೆ ಸದಸ್ಯರಿಗೆ 25% ಡಿವಿಡೆಂಟ್ ನೀಡುವ ಗುರಿ ಹೊಂದಲಾಗಿದೆ.ಈ ಬಾರಿ ಕೊಡಗು ಜಿಲ್ಲೆಯ ನಾಪೊಕ್ಲು ಸೋಮವಾರ ಪೇಟೆಯಲ್ಲಿ ಹೊಸ ಶಾಖೆ ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ವಾರ್ಷಿಕ ಮಹಾಸಭೆಯಲ್ಲಿ 53 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ಪತ್ರಕರ್ತರ ಭವನ ನಿರ್ಮಾಣಕ್ಕೆ 1 ಲಕ್ಷ ರೂಪಾಯಿಗಳ ಚೆಕ್ ನ್ನು ವಿತರಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಮೋಹನ್‌ರಾಂ ಸುಳ್ಳಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ
ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ ತೀರ್ಥರಾಮ, ಚಂದ್ರ ಕೋಲ್ಟಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ ಸದಾನಂದ, ಪಿ.ಎಸ್. ಗಂಗಾಧರ, ದಾಮೋದರ ನಾರ್ಕೋಡು, ದಿನೇಶ ಮಡಪ್ಪಾಡಿ, ಶ್ರೀಮತಿ ಜಯಲಲಿತಾ ಕೆ.ಎಸ್, ಶ್ರೀಮತಿ ನಳಿನಿ ಸೂರಯ್ಯ, ಶ್ರೀಮತಿ ಲತಾ ಎಸ್ ಮಾವಾಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜಾಕೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
- Saturday
- November 23rd, 2024