Ad Widget

ಸುಬ್ರಹ್ಮಣ್ಯ :- ಶುಭಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 8ನೇ ವಾರ್ಷಿಕ ಮಹಾಸಭೆ

ಶುಭಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ 8ನೇ ವಾರ್ಷಿಕ ಮಹಾಸಭೆಯು ಸೆ.16 ರಂದು ಕಛೇರಿಯ ಆವರಣದಲ್ಲಿ ದಿನೇಶ್.ಬಿ.ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

. . . . . . . . .

ಶ್ರೀಮತಿ ಶ್ವೇತಾ ರವರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭಗೊಂಡಿತು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ದಿನೇಶ್.ಬಿ.ಎನ್ ರವರು ಸಂಘದ ಬೆಳವಣಿಗೆಯ ಬಗ್ಗೆ ಹೇಳಿದರು.

. . . . . . .

ಅದೇ ರೀತಿ ಸಂಘದ ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಅವರು ಮಾತನಾಡಿ ಸಂಘದ ಬೆಳವಣಿಗೆ ಹೇಗೆ ಆಗಬೇಕು, ಸಾಲಗಳನ್ನು ಯಾವ ರೀತಿ ವಸೂಲಾತಿ ಮಾಡಬೇಕು ಮತ್ತು ಯಾವ ಆಧಾರದಲ್ಲಿ ಸಾಲ ನೀಡಬೇಕು ಎಂಬುವುದನ್ನು ತಿಳಿಸಿದರು.

ಸಂಘದ ನಿರ್ದೇಶಕರಾದ ಕಿಶೋರ್ ಕುಮಾರ್ ಕೂಜುಗೋಡು ಮತ್ತು ವೆಂಕಟೇಶ್.ಹೆಚ್.ಎಲ್ ರವರು ಶುಭ ನುಡಿಗಳನ್ನು ನುಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಗೋವರ್ಧನ್.ಕೆ.ಸಿ ಅವರು ವಾರ್ಷಿಕ ವರದಿಯನ್ನು ಓದಿ ಧನ್ಯವಾದ ಸಮರ್ಪಿಸಿದರು. ಸಂಘವು ವರದಿ ಸಾಲಿನಲ್ಲಿ 1,89,21,748.86 ರೂಪಾಯಿ ವ್ಯವಹಾರ ನಡೆಸಿ 1,73,539.24 ರೂಪಾಯಿ ನಿವ್ವಳ ಲಾಭ ಗಳಿಸಿರುತ್ತದೆ.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading