
ಜವಾಹರ್ ಲಾಲ್ ನೆಹರು ತಾರಾಲಯ ಬೆಂಗಳೂರು, ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ರೋಟರಿ ವಿದ್ಯಾ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿ ಪ್ರಣಮ್ಯ ಎನ್ ಆಳ್ವ ಅವರು ಮೊದಲನೇ ಎರಡನೇ ಹಾಗೂ ಮೂರನೇ ಸುತ್ತಿನಲ್ಲಿ ಪ್ರಶಂಸನೀಯ ಪ್ರದರ್ಶನ ನೀಡಿ, ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಸ್ಪರ್ಧಿಸಿ, ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಶಿಕ್ಷಕಿ ಉಷಾ. ಕೆ. ಹಾಗೂ ಪಲ್ಲವಿ.ಕೆ.ಎಸ್. ಮಾರ್ಗದರ್ಶನ ನೀಡಿರುತ್ತಾರೆ.
ಇವರು ಬಂದಡ್ಕ ನಿಶಾಂತ್ ಆಳ್ವ ಹಾಗೂ ಸುಪರ್ಣ. ಎನ್. ಆಳ್ವ ದಂಪತಿಗಳ ಪುತ್ರಿ.