
ಸುಳ್ಯ ಪಯಸ್ವಿನಿ ಜೇಸಿಸ್ ಮತ್ತು ರೋಟರಿ ಕ್ಲಬ್ ವತಿಯಿಂದ ದೇಶ ಪರ್ಯಟನೆಯ ಸೈಕ್ಲಿಂಗ್ ಅಭಿಯಾನ ಹಮ್ಮಿಕೊಂಡ 16 ವರ್ಷ ಪ್ರಾಯದ ಶಾಹಿಲ್ ಜಾ ಎಂಬ ಕಲ್ಕತ್ತ ಮೂಲದ ಯುವಕನನ್ನು ಸುಳ್ಯದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.ಮಣ್ಣಿನ ಸಂರಕ್ಷಣೆ (ಸೇವ್ ಸಾಯಿಲ್) ಎಂಬ ಉದ್ದೇಶದಿಂದ ಸದ್ಗುರು ರವರ ಪ್ರೇರೆಪಣೆಯಿಂದ ಕಲ್ಕತ್ತಾದಿಂದ ಹೊರಟ ಯುವಕನ ಸೈಕ್ಲಿಂಗ್ ಯಾತ್ರೆ ಈಗಾಗಲೇ 8 ರಾಜ್ಯಗಳನ್ನು ಪೂರೈಸಿ ಸುಮಾರು 24,000 ಕಿ.ಮೀ . ನಷ್ಟು ಕ್ರಮಿಸಿ ಸುಳ್ಯ ತಲುಪಿದಾಗ ಅವರನ್ನು ಸ್ವಾಗತಿಸಿ ಸನ್ಮಾನಿಸಿ ಮುಂದಿನ ಸೈಕ್ಲಿಂಗ್ ಪ್ರಯಾಣಕ್ಕೆ ಶುಭ ಹಾರೈಸಲಾಯಿತು.