Ad Widget

ನಿಭಾ.ಸಿ ಶೆಟ್ಟಿ ಸೂರಿಂಜೆ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ

ಸುಳ್ಯದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿ ನಿಭಾ.ಸಿ ಶೆಟ್ಟಿ ಸೂರಿಂಜೆ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ್ದಾರೆ. ಇವರು ಹನುಮಾನಾಸನದಲ್ಲಿ 01 ಗಂಟೆ 02 ನಿಮಿಷ 47 ಸೆಕೆಂಡುಗಳ ಕಾಲ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ನಿರಂತರ ಯೋಗ ಕೇಂದ್ರದ ಯೋಗಗುರು ಶರತ್ ಮರ್ಗಿಲಡ್ಕ ಅವರ ಜೊತೆ ಮಾರ್ಗದರ್ಶನ ಪಡೆಯುತ್ತಿರುವ ಇವರು ಇನ್ ಫೆಂಟ್ ಮೇರಿ ಶಾಲೆ ಕಾಟಿಪಳ್ಳ ಇಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಸೂರಿಂಜೆ ಮಾರ್ಲರ ಮನೆ ನಿವಾಸಿ ಚಂದ್ರಹಾಸ ಶೆಟ್ಟಿ ಮತ್ತು ಶ್ರೀಮತಿ ಮಮತಾ ಶೆಟ್ಟಿ ದಂಪತಿಗಳ ಪುತ್ರಿ.

. . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!