Ad Widget

ಬೆಂಗಳೂರಿನ ಆರ್.ಎನ್.ಎಸ್. ಮತ್ತು ಜ್ಞಾನಮಂದಾರ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಆರ್.ಎನ್.ಎಸ್. ಪದವಿಪೂರ್ವ ಕಾಲೇಜು ಮತ್ತು ಜ್ಞಾನಮಂದಾರ ಶಿಕ್ಷಕಿಯರ ತರಬೇತಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ.22 ರಂದು ಆರ್.ಎನ್.ಎಸ್.ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

. . . . . . . . .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ‌. ಉಪಕುಲಪತಿಗಳಾದ ಡಾ. ಪಿ.ಎಸ್.ಎಡಪಡಿತ್ತಾಯ, ಗೌರವಾನ್ವಿತ ಅತಿಥಿಗಳಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಮಾಜಿ ಅಧ್ಯಕ್ಷ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಆಗಮಿಸಲಿದ್ದಾರೆ. ಆರ್.ಎನ್. ಎಸ್. ಮುಖ್ಯ ಆಡಳಿತಾಧಿಕಾರಿ ಡಾ. ಸುಧೀರ್ ಪೈ ಕೆ.ಎಲ್. ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

. . . . . . .

ಡಾ.ಪಿ.ಎಸ್. ಯಡಪಡಿತ್ತಾಯರಿಗೆ ಬಸವ ಶ್ರೀ ಪ್ರಶಸ್ತಿ, ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಗೌರವ ಸಮರ್ಪಣೆ, ಎಸ್. ಜಗದೀಶ್ಚಂದ್ರ ಅಂಚನ್ ರಿಗೆ ಸಿದ್ಧಗಂಗಾ ಶ್ರೀ, ವಿದುಷಿ ಹರ್ಷಿತ ಎನ್. ಅವರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕು.ಪೃಥ್ವಿ ಸಿ.ಎಸ್. ಮತ್ತು ಕು.ರಕ್ಷಾ ಬಿ.ಎಚ್. ಅವರಿಗೆ ಕರ್ನಾಟಕ ಚೇತನ ಪ್ರಶಸ್ತಿ, ಕು.ಪ್ರೀತಿ ಸುಧೀರ್ ಪೈ, ಕು. ಶರಣ್ಯ ಆರ್.ಬಿ. ಮತ್ತು ಕು. ವಿಪಂಚಿ ಎಂ.ಎಸ್. ಅವರಿಗೆ ಅರಳು ಮಲ್ಲಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಜ್ಞಾನಮಂದಾರ ಟ್ರಸ್ಟ್ ನ ಸಂಸ್ಥಾಪಕರಾದ ಹೆಚ್.ಜೆ. ಸೋಮಶೇಖರ್ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading