ಬೆಳ್ಳಾರೆ ಜೇಸಿ ಸಪ್ತಾಹದ ಅಂಗವಾಗಿ 6 ದಿನ ಕಳಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ಬೂಸ್ಟರ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಶ್ರೀ ಪ್ರಶಾಂತ ಕುಮಾರ್ ಕಿಲ೦ಗೊಡಿ ಭಾಗವಹಿಸಿದರು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಬೇಬಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕಳಂಜದ ಶ್ರೀಮತಿ ಕೆ ಸಿ ಬೇಬಿ, ಆರೋಗ್ಯ ಉಪಕೇಂದ್ರ ಕಳಂಜದ ಎಚ್ ಡಬ್ಲ್ಯು ಸಿ ಶ್ರೀಮತಿ ಶಿಲ್ಪಾ, ಕಳಂಜ ಗ್ರಾಮದ ಆಶಾ ಕಾರ್ಯಕರ್ತೆಯರು ಉಪಸ್ಥಿತಿಯಲ್ಲಿದ್ದರು.
ಬೆಳ್ಳಾರೆ ಜೇಸಿಐ ಅಧ್ಯಕ್ಷೆ ನಿರ್ಮಲಾ ಜಯರಾಂ ಸಭಾಧ್ಯಕ್ಷತೆ ವಹಿಸಿಕೊಂಡು, ಜೆ ಸಿ ಶಿವಕುಮಾರ್ ರೈ ಮಣಿಕ್ಕರ ವಂದಿಸಿದರು. ಕಳಂಜ ಗ್ರಾಮದ ಹೆಚ್ಚಿನ ನಾಗರಿಕರು ಇದರ ಸದುಪಯೋಗ ಪಡೆದುಕೊಂಡರು.