ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಹಾಗೂ ರಿನೀವಲ್ ಮಾಡುವ ವಿಶೇಷ ಕ್ಯಾಂಪ್ ಇಂದು ನಡೆಯಿತು. ವಿಕಲಚೇತನ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಂಟಿಯಾಗಿ ಈ ಕ್ಯಾಂಪ್ ನಡೆಯಿತು. ತಾಲೂಕು ಪಂಚಾಯತ್ ನ ವಿಕಲಚೇತನ ರ ಇಲಾಖೆಯ ಸಂಯೋಜಕ ಚಂದ್ರ ಶೇಖರ್, ನಗರ ಪಂಚಾಯತ್ ನ ವಿಕಲಚೇತನ ಇಲಾಖೆಯ ಮೇಲ್ವಿಚಾರಕರಾದ ಪ್ರವೀಣ್ ನಾಯಕ್, ತಾಲ್ಲೂಕಿನ ಇತರ ಪಂಚಾಯತ್ ಗಳ ಇಲಾಖೆಯ ಮೇಲ್ವಿಚಾರಕ ವಿ ರ್ ಡಬ್ಲ್ಯೂ ಕೃಷ್ಣ ಪ್ರಸಾದ್ ಬಾಳಿಲ, ಷಣ್ಮುಖ, ಪುಷ್ಪಶ್ರೀ, ಹರಿಣಿ, ಆಶೀಶ್, ದಿನೇಶ, ವಿಶ್ವನಾಥ, ಮೀನಾಕ್ಷಿ ಮತ್ತು ಆರೋಗ್ಯ ಇಲಾಖೆಯ ಚಂದ್ರಪ್ಪ ಮತ್ತು ಆರೋಗ್ಯ ಸಹಾಯಕಿ ನಯನ ಮತ್ತಿತರರು ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾಕ್ಟರ್ ಕರುಣಾಕರ್ ನೇತೃತ್ವದಲ್ಲಿ ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ವಿಶೇಷ ಚೇತನರು ಇದರ ಪ್ರಯೋಜನ ಪಡೆದು ಕೊಂಡರು.
- Saturday
- November 23rd, 2024