ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ವಳಲಂಬೆಯ ಸಮೀಕ್ಷಾ ಎಂಬ ಬಾಲಕಿಗೆ ಸುಮಾರು 56800 ರೂ ಹಣವನ್ನು ಕೊಲ್ಲಮೊಗ್ರ ಗ್ರಾಮದಿಂದ “ಸಹಾಯ ಹಸ್ತ” ಎಂಬ ವಾಟ್ಸಪ್ ಗ್ರುಪ್ ಮೂಲಕ ಸಂಗ್ರಹವಾಗಿತ್ತು. ಉದಯ ಶಿವಾಲ ಈ ವಾಟ್ಸಪ್ ಗ್ರುಪ್ ನ್ನು ರಚಿಸಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ನೆರೆ ಹಾನಿ ಮತ್ತು ಪ್ರವಾಹಕ್ಕೆ ಸಿಲುಕಿ ಚೇತರಿಸಿಕೊಳ್ಳುತ್ತಿರುವ ಈ ಗ್ರಾಮದಲ್ಲಿ ಇಷ್ಟು ಮೊತ್ತ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಗಿತ್ತು. ಇದಕ್ಕೆ ಸಹಕರಿಸಿದ ಊರಿನ ಜನರಿಗೆ ಉದಯ ಶಿವಾಲ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಣವನ್ನು ಇಂದು ಸಮೀಕ್ಷಾ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಮಲಾಕ್ಷ ಮುಳುಬಾಗಿಲು,ಶೇಖರಪ್ಪ ಬೆಂಡೋಡಿ,ಗಣೇಶ್ ಶಿವಾಲ,ಮಾಧವ ಚಾಂತಳ,ಗಣೇಶ್ ಶಿವಾಲ,ಲವಿತ್ ಪಡ್ಪು, ಹೇಮಂತ್ ಚಾಳೆಪ್ಪಾಡಿ, ರಾಕೇಶ್ ಮುಳ್ಳುಬಾಗಿಲು ಮತ್ತು ಉದಯ ಶಿವಾಲ ಉಪಸ್ಥಿತರಿದ್ದರು.
- Tuesday
- December 3rd, 2024