Ad Widget

ಪೆರಾಜೆ ಸೊಸೈಟಿಯ ವಾರ್ಷಿಕ ಮಹಾಸಭೆ – ರೂ. 33.51 ಲಕ್ಷ ಲಾಭ- ಶೇ. 8 ಡಿವಿಡೆಂಟ್

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.11 ರಂದು ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಅನ್ನಪೂರ್ಣೇಶ್ವರಿ ಕಲಾ ಮಂದಿರ ಪೆರಾಜೆಯಲ್ಲಿ ನಡೆಯಿತು.”ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಹಕಾರ ಕ್ಷೇತ್ರದ ಪ್ರಗತಿ ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯು ಸಾಮಾಜಿಕ ಬದ್ಧತೆ, ಶುದ್ಧತೆ, ಆಧುನಿಕತೆ, ತಾಂತ್ರಿಕತೆ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಖಾಸಗಿ ಕ್ಷೇತ್ರದ ಸ್ಪರ್ಧೆಯನ್ನು ಎದುರಿಸಿಕೊಂಡು ಸರ್ಕಾರದ ನೀತಿ ನಿಯಮಗಳ ಚೌಕಟ್ಟಿನೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರ ಚಳುವಳಿಯ ಆಳ ಅಗಲ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಸ್ಥಾಪಿಸಿರುವುದು ಸಹಕಾರದ ಬೆಳವಣಿಗೆ ಪೂರಕವಾಗಿದೆ” ಎಂದು ಮಾತನಾಡುತ್ತಾ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಕಾರಣಕರ್ತರು ಹಾಗೂ ಶೇ100 ವಸೂಲಾತಿಗೆ ಸಹಕರಿಸಿದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ.ಎಂ ನಿರ್ದೇಶಕರುಗಳಾದ ಮೋನಪ್ಪ ಎನ್.ಬಿ, ಪ್ರಸನ್ನ ನೆಕ್ಕಿಲ,ದೀನರಾಜ ದೊಡ್ಡಡ್ಕ, ಪ್ರಮೀಳಾ ಎನ್ ಬಂಗಾರಕೋಡಿ, ದಾಸಪ್ಪ ಮಡಿವಾಳ, ಉದಯಕುಮಾರ ಪಿ.ಎ, ಶೇಷಪ್ಪ ಎನ್.ವಿ, ಜಯರಾಮ ಪಿ.ಟಿ, ಕಿರಣ ಬಂಗಾರಕೋಡಿ,ಆಂತರಿಕ ಲೆಕ್ಕಪರಿಶೋಧಕರಾದ ರತ್ನಾಕರ ಬಳ್ಳಡ್ಕ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ವಿಜಯ ಕೆ.ಎಸ್ ಉಪಸ್ಥಿತರಿದ್ದರು. ಮಾ| ಯತೀಶ್ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ ಎಚ್. ಕೆ. ಸ್ವಾಗತಿಸಿದರು. ನಿರ್ದೇಶಕ ಪ್ರಸನ್ನ ಎನ್.ಬಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading