
ಶತಮಾನದ ಹೊಸ್ತಿಲಿನಲ್ಲಿರುವ ಮರ್ಕಂಜ ಗ್ರಾಮದ ಮಿತ್ತಡ್ಕ ಮರ್ಕಂಜ ಶಾಲಾ ಅಭಿವೃದ್ಧಿಗೆ ರೂ.50 ಲಕ್ಷ ಅನುದಾನ ಒದಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರಿಗೆ ಶಾಲಾ ಪೋಷಕ ಪ್ರತಿನಿಧಿ ಜಗನ್ನಾಥ ಜಯನಗರ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ವಿಧಾನಸೌಧದಲ್ಲಿ ಜಗನ್ನಾಥ ಅವರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಶಾಲಾ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಲು ಮನವಿ ಸಲ್ಲಿಸಿದರು. ಸಚಿವರು ಮನವಿಗೆ ಸ್ಪಂದಿಸಿದ್ದಾರೆಂದು ಜಗನ್ನಾಥ ಅವರು ತಿಳಿಸಿದ್ದಾರೆ.