
ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಸೆ. 25 ರಿಂದ ಅ. 4 ರ ವರೆಗೆ ನವರಾತ್ರಿ ಉತ್ಸವ ಜರುಗಲಿರುವ ಪ್ರಯುಕ್ತ ದೇವಳದ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ದೇವಸ್ಥಾನದ ಸಮಿತಿ ಅಧ್ಯಕ್ಷ ವಸಂತ ನಡುಬೈಲು ವಹಿಸಿದ್ದರು.
ಸಮಿತಿಯ ಸದಸ್ಯರಾದ ವೆಂಕಪ್ಪಗೌಡ ಆಲಾಜೆ, ಭಾಗ್ಯಪ್ರಸನ್ನ ಕೆ, ವಾರಿಜಾಕ್ಷಿ ಕೆವಿಜಿ, ಭಜನಾ ಮಂಡಳಿ ಅಧ್ಯಕ್ಷ ಸುಂದರ ಗೌಡ ಆರೆಂಬಿ, ನಾರಾಯಣ ನಾಯ್ಕ ರಂಜಿತ್ ಅನ್ನೋವು, ಕೀರ್ತನ್ ಕಳತ್ತಜೆ, ಕಾರ್ತಿಕ್ ಆರಂಬಿ, ಗಿರೀಶ್ ಕೆ., ಯತೀಶ್ ನಾಗನಕಜೆ, ಧರ್ಮಪಾಲ ಅನ್ನೋವು, ಪ್ರದೀಪ್ ಎಣ್ಣೂರು, ಜಯಪ್ರಕಾಶ್ ಲೆಕ್ಕೆಸಿರಿಮಜಲು, ವಸಂತ ಕುಕ್ಕಾಯಕೋಡಿ, ರಾಮಚಂದ್ರ ಪೂಜಾರಿ ನೂಜಾಡಿ ಇನ್ನಿತರರು ಉಪಸ್ಥಿತರಿದ್ದರು.