ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾರವರು ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನಡುಗಲ್ಲು-ದೇವರಹಳ್ಳಿ, ಕಲ್ಲಾಜೆ ಪರಿಸರದಲ್ಲಿ ಸಾರ್ವಜನಿಕರಿಂದ ಸಹಾಯಧನ ಸಂಗ್ರಹ ಮಾಡಿ ಸಾರ್ವಜನಿಕರ ನೆರವಿನಿಂದ ಸಂಗ್ರಹವಾದ 18,530 ರೂಪಾಯಿ ಸಹಾಯಧನವನ್ನು ಸೆ.11 ರಂದು ಸಮೀಕ್ಷಾರವರ ಮನೆಗೆ ತೆರಳಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಕ್ಷಿತ್ ಕಾರ್ಜ, ಹರೀಶ್ ಅಂಜೇರಿ, ಯತೀಶ್ ಕಲ್ಲಾಜೆ, ನಾಗೇಶ್ ವಾಲ್ಪಾರೆ, ಸುಬ್ರಹ್ಮಣ್ಯ ಇಜಿನಡ್ಕ, ಮೋಹನ್ ಚಾರ್ಮತ, ಸುಂದರ ಕಾಯರಮುಗೇರು, ಕುಸುಮಾಧರ ನೆಲ್ಲಿಪುಣಿ, ಮೇಘನ್ ಕಲ್ಲಾಜೆ ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ
- Thursday
- November 21st, 2024