Ad Widget

ಬೆಳ್ಳಾರೆ : ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಆರೋಪಿಯ ಬಂಧನ

ಪ್ರವೀಣ್ ಕೊಲೆ ಆರೋಪಿ ಶಫೀಕ್ ನ ತಮ್ಮ ಸಪ್ರೀದ್
ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮುರೈ ಕಾಂಪ್ಲೆಕ್ಸ್‌ನ ಮ್ಯಾನೇಜರ್ ಪ್ರಶಾಂತ್ ರೈವರಿಗೆ ಜೀವ ಬೆದರಿಕೆ ಹಾಕಿದ್ದಾನೆಂದು ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ನಿನ್ನೆ ಸಂಜೆ ದೂರು ದಾಖಲಾಗಿತ್ತು.

. . . . .

ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ನೂರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಸಪ್ರೀದ್ ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. 24 ಗಂಟೆಯೊಳಗೆ ಬಂಧಿಸದಿದ್ದರೇ ಬೆಳ್ಳಾರೆ ಬಂದ್ ಗೆ ಕರೆ ನೀಡುವುದಾಗಿ ಸಂಘಟನೆಯ ಪ್ರಮುಖರು ಹೇಳಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಬಜರಂಗದಳದ ಪ್ರಮುಖರು ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೋಲೀಸರು ಆರೋಪಿ ಸಪ್ರೀದ್ ನನ್ನು ಬಜ್ಪೆಯಲ್ಲಿ ಬಂಧಿಸಿ ಬೆಳ್ಳಾರೆಗೆ ಕರೆತರುತ್ತಿದ್ದಾರೆಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!